ಬೀದಿ ವ್ಯಾಪಾರಿಗಳ ಸ್ಥಳಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಮನವಿ
ಕಲಬುರಗಿ,ಸೆ.16- ಮಹಾ ನಗರದ ಬೀದಿ ಬದಿವ್ಯಾಪಾರಿಗಳಿಗಾಗಿ ಗುರುತಿಸಲಾದ ನಿಗದಿತ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಅಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಮನವಿ ಮಾಡಿದ್ದಾರೆ.
ಮಹಾನಗರ ಪಾಲಿಕೆ ವಲಯ-1ರ ವತಿಯಿಂದ ಸೂಪರ ಮಾರುಕಟ್ಟೆ ಹಳೆ ಜೈಲ್ ಬಳಿ ನಿಗದಿ ಪಡಿಸಿರುವ ಬೀದಿಬದಿ ವ್ಯಾಪಾರಿಗಳ ಕಟ್ಟೆಗಳ ಸಂಕೀರರ್ಣದಲ್ಲಿ ಮೂಲಭೂತ ಸೌಕರ್ಯ ಒದಗಿಸದೇ ಇರುವುದರಿಂದ ಅಲ್ಲಿ ತಮ್ಮ ವ್ಯಾಪಾರಗಳನ್ನು ನಡೆಸಲು ಹಿಂದೇಟು ಹಾಕಲಾಗುತ್ತಿದೆ ಹೀಗಾಗಿ ಅಲ್ಲಿ ಈ ಕೂಡಲೇ ಮೂಲ ಸೌಕರ್ಯ ಕಲ್ಪಿಸಲು ಮಹಾನಗರ ಪಾಲಿಕೆಗೆ ನಿದೇರ್ಶನ ನೀಡುವಂತೆ ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಕುರಿತು ಈಗಾಗಲೇ ಪಾಲಿಕೆಯ ಮೇಯರ್ ಯಲ್ಲಪ ನಾಯ್ಕೋಡಿ ಅವರನ್ನು ಸಂಘದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈಗಾಗಲೇ ಹಳೆ ಜೇಲ್ ಚೌಪಾಟಿ ಸೂಪರ ಮಾರ್ಕೆಟ್ ಜಾಗದಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡದೇ `ಸರಾಫ್ ಬಜಾರ, ಕಿರಾಣಾ ಬಜಾರ, ಚಪ್ಪಲ ಬಜಾರ, ಕಪಡಾ ಬಜಾರ, ಜನತಾ ಬಜಾರ, ದತ್ತ ಮಂದಿರ, ಸಿಟಿ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಪ್ರದೇಶಗಳ ಮುಖ್ಯ ರಸ್ತೆಗಳ ಬೀದಿಬದಿಯಲ್ಲಿ ಕುಳಿ ತುಕೊಂಡು ವ್ಯಾಪಾರ ಮಾಡು ತ್ತಿರುವ ಇವರೆಲ್ಲರನ್ನು 2014 ಮತ್ತು 2019 ರ ಕಾಯ್ದೆ ಯನ್ವಯ ದಿನಾಂಕ: 02.08.2017 ರಂದು ಅಂದಿನ ನಗರಾಭಿವೃದ್ಧಿ ಸಚಿವರಾದ ರೋಷನ್ ಬೇಗ್ ಸೇರಿದಂತೆ ಜಿಲ್ಲಾ ಉಸ್ತು ವಾರಿ ಸಚಿವರಾದ ಡಾ. ಶರಣಪ ಕಾಶ ಪಾಟೀಲ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಪಿ.ಸುನೀಲ ಕುಮಾರ ರವರು, ಸಂಘದ ಮನವಿಗೆ ಸ್ಪಂಧಿಸಿ ಹಳೆ ಜೇಲ್ ಚೌಪಾಟಿ ಸ್ಥಳವನ್ನು ಪರಿಶೀ ಲಿಸಿ ಈ ಸ್ಥಳದಲ್ಲಿ ಬೀದಿ ಬದಿ ಯಲ್ಲಿ ಕುಳಿತುಕೊಂಡು ಸೂಪರ ಮಾರ್ಕೆಟ್ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಈ ಸ್ಥಳದಲ್ಲಿ ವ್ಯಾಪಾರ ಮಾಡಲು ಮತ್ತು ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ಶೌಚಾ ಲಯ, ವಿದ್ಯುತ್ ಸೌಕರ್ಯಗಳನ್ನು ಒದಗಿಸಲು ಸಚಿವರು, ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನಿಡಿದ್ದರು. ಆದರೆ 2017 ರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪಾಲಿಕೆಯ ವಲಯ-1, 2 ಮತ್ತು 3 ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಐ.ಟಿ.ಐ. ಕಾಲೇಜು ಎದುರು ಗಡೆ, ಎಂ.ಎಸ್.ಕೆ.ಮಿಲ್ ರಸ್ತೆ ಕಲಬುರಗಿ, ಡಂಕಾ ವೃತ್ತದಿಂದ ಪಾಕಿಜಾ ವೈನ್ ಶಾಪ್ ವರೆಗೆ, ಕೆ.ಎಂ.ಎಫ್. ಡೈರಿ ಎದುರುಗಡೆ, ಅಣಕಲ್ ಪೆಟ್ರೋಲ್ ಬಂಕ್ ಎದುರುಗಡೆ, ಅಂಡರಬ್ರಿಜ್ ಪಂಚಶೀಲ ನಗರ, ಆಳಂದ ಚೆಕ್‍ಪೆÇಸ್ಟ ಸೂಪರ ಮಾರ್ಕೆಟ್, ಕಲಬುರಗಿ ಈ ಏಳು ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾ ರಸ್ಥರನ್ನು ಗುರುತಿಸಲಾಗಿದ್ದು, ಇಲ್ಲಿವೂ ಕೂಡ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ ಈ ಕೂಡಲೇ ಇದರ ಕುರಿತು ತುರ್ತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಆದೇಶ ನೀಡಬೇಕು ಎಂದು ಸೂರ್ಯವಂಶಿ ಅವರು ಒತ್ತಾಯಿಸಿದ್ದಾರೆ.