9ನೇ ದಿನದ ಹಿಂದೂ ಮಹಾಗಣಪತಿ ಅದ್ದೂರಿ ವಿಸರ್ಜನೆ
ಇಂಡಿ,ಸೆ.16-ಹಿಂದೂ ಮಹಾಗಣಪತಿ ಸಂಘದ ವತಿಯಿಂದ ಪ್ರತಿಷ್ಠಾಪನೆ ಗೊಳಿಸಿದ 9ನೇ ದಿನದ ಗಣೇಶ ಮೂರ್ತಿಯ ಅದ್ದೂರಿ ವಿಸರ್ಜನೆ ರವಿವಾರ ಸಂಜೆ ಶಿರಗೂರ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು.
ವಿಸರ್ಜನೆ ಹಿನ್ನೆಲೆಯಲ್ಲಿ ಶನಿವಾರ ಶಾಲಾ ಮಕ್ಕಳಿಂದ ರಂಗೋಲಿ ಬಿಡಿಸುವ ಸ್ಪರ್ಧೆ, ನೃತ್ಯ, ಕೋಲಾಟ ನಡೆಯಿತು. ಯುವಕರು ಮತ್ತು ಹಿರಿಯರು ಕೋಲಾಟದ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಟ್ಯಾಕ್ಟರ್, ಬೈಸಿಕಲ್ ಪಾದಯಾತ್ರೆಗಳ ಮೂಲಕ ಗಣೇಶ ಮೂರ್ತಿಯ ಮೆರವಣಿಗೆ ನಡೆಯಿತು.
ದಾರಿಯುದ್ಧಕ್ಕೂ ಗಣಪತಿ ಬಪ್ಪ ಮೋರೆ ಎಂಬ ಘೋಷಣೆ ಕೂಗಿದರು. ಪರಸ್ಪರ ಗುಲಾಲು ಎರಚಿಕೊಂಡು ಯುವಕರು ಡಿಜೆ ಧ್ವನಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದೂ ಮಹಾಗಣಪತಿ ಯುವಕರಿಂದ ಸ್ಥಾಪಿಸಿದ ಗಣೇಶ್ ಮೂರ್ತಿ ಪ್ರತಿಷ್ಠಾಪನೆಯ 9 ದಿನಗಳ ಕಾಲ ಅಲಂಕಾರ ಪೂಜೆ ನೆರವೇರಿಸಲಾಯಿತು. ಗ್ರಾಮದ ಹಿರಿಯ ಮುಖಂಡ ಜಾಗೀರ್ದಾರ್‍ರಿಂದ ಸತ್ಯನಾರಾಯಣ ಪೂಜೆ ಮತ್ತು ಗಣೇಶ್ ಮೂರ್ತಿಗೆ ವಿಶೇಷ ಅಭಿಷೇಕದೊಂದಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.
9 ದಿನಗಳ ನಂತರ ಗ್ರಾಮದ ಭೀಮಾನದಿಯಲ್ಲಿ ಗಣೇಶ್ ಮೂರ್ತಿ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವಾನಂದ್ ಕೋಳಿ, ಖಾಜಪ್ಪ ನಾವದಗಿ, ಯುವರಾಜ್ ಬಿರಾದರ್, ಗಂಗಾಧರ್ ಪೂಜಾರಿ, ಭಿಮಾಶಂಕರ್ ಪೂಜಾರಿ, ಮಂಜುನಾಥ್ ಘಂಟೆನವರ್, ಪುಂಡಲಿಕ್ ಅಪ್ತಾಗೀರಿ, ಶ್ರೀಶೈಲ ನಾವದಗಿ, ವಿಠ್ಠಲ್ ಪೂಜಾರಿ, ಆಕಾಶ್ ಜಮಖಂಡಿ, ಸಿದ್ಧರಾಮ್ ಹಿರೇಮಠ್, ಉಮೇಶ್ ಗೋಲಗೇರಿ, ಶಂಕರ್ ನಾಯ್ಕೋಡಿ, ಜಟ್ಟೆಪ್ಪ ಹಿರೇಮಠ, ಶಿವಾನಂದ್ ಗೋಡ್ಕೆ, ಗೌಡಣ್ಣ ಬಿರಾಧಾರ್, ಮಂಜುನಾಥ್ ನಾವದಗಿ, ದಾನಯ್ಯ ಹಿರೇಮಠ, ಲಾಯಪ್ಪ ಶಿರಗೂರ, ಹಾಗೂ ಗ್ರಾಮಸ್ಥರ ಸೇರಿದಂತೆ ಇನ್ನಿತರರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.