ಜಿಎನ್‍ಡಿ ಕಾಲೇಜ್ : ನವೀನ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ
ಬೀದರ:ಅ.4: 2024-25 ನೇ ಶೈಕ್ಷಣಿಕ ಸಾಲಿಗೆ ಗುರು ನಾನಕ ದೇವ್ ಇಂಜಿನೀಯರಿಂಗ್ ಕಾಲೇಜ್‍ನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹದಿನಾಲ್ಕು ದಿವಸಗಳ ಇಂಡಕ್ಷನ್ ಕಾರ್ಯಕ್ರಮ ಜಿಎನ್‍ಡಿ ಕಾಲೇಜ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೊಸ ಬ್ಯಾಚ್‍ನ ವಿದ್ಯರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಮಾರ್ಗದರ್ಶನ ಮತ್ತು ವ್ಯಯಕ್ತಿಕ ಅಭಿವೃದ್ದಿ ಪ್ರೇರೇಪಿಸುವ ಗುರಿ ಹೊಂದಲಾಗಿತ್ತು. ಶೈಕ್ಷಣಿಕ ತಜ್ಷ ಮತ್ತು ವಿವಿಧ ಕ್ಷೇತ್ರ ಪರೀಣಿತರಿಂದ ಶೈಕ್ಷಣಿಕ ಶ್ರೇಷ್ಠತೆ ಬಗ್ಗೆ ಅರಿವು ಮೂಡಿಸಿದರು.
ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ ಅವರು ಮಾತನಾಡುತ್ತ ಜಿಲ್ಲೆಯಲ್ಲಿ ಗುರು ನಾನಕ ಎಂಜಿನಿಯರಿಂಗ್ ಕಾಲೇಜು ಉತ್ತಮ ಹಾಗೂ ಉನ್ನತ ಮಟ್ಟದ ಶಿಕ್ಷಣ ನೀಡುತ್ತಿದೆ. ಉನ್ನತ ಮಟ್ಟದ ವಿದ್ಯಾಭ್ಯಾಸ ಕಡೆಗೆ ಗಮನವಿಟ್ಟು ತಾವುಗಳು ಕಠಿಣ ಪರಿಶ್ರಮ ಪಟ್ಟು ಓದಿ, ಕಾಲೇಜಿನಲ್ಲಿ ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯಗಳಿವೆ. ಇಲ್ಲಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಯರನ್ನು ಪ್ರಮಾಣ ಪತ್ರ ಮತ್ತು ಸ್ಮರಣೀಕೆಯನ್ನು ನೀಡಿ ಗೌರವಿಸಲಾಯಿಸಿ ಉನ್ನತ ಗುರಿ ಸಾಧಿಸಲು ಇತವರುಗಳು ಪ್ರೇರಣೆ ಎಂದರು.
ಪ್ರೇರಕ ಭಾಷಕಾರರಾದ ಎಂ.ಹೆಚ್. ಸಾಗರ ಅವರು ಮಾತನಾಡುತ್ತ ಕಾಲೇಜಿನಲ್ಲಿ ಎಲ್ಲಾ ತರಹದ ಸೌಲತ್ತು ಇದೆ. ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು, ಮೊದಲ್ ವರ್ಷದಿಂದಲೆ ಕಠಿಣ ಪರಿಶ್ರಮ ಪಟ್ಟು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ಬಿ.ಜಿ.ಮೂಲಿಮನಿ, ಶ್ರೀಮತಿ ಶೈನಿ ರಾಜೇಂದ್ರಕುಮಾರ, ಪ್ರಾಂಶುಪಾಲರಾದ ಡಾ. ಸುರೇಶ್ ರಾಮಾ ಸ್ವಾಮಿ ರಡ್ಡಿ ಮತ್ತು ಡಾ. ಧನಂಜಯ ಎಂ. ಉಪಸ್ಥಿತರಿದ್ದರು.