ಮಸ್ಕಲನಲ್ಲಿ ಸಂಗೀತ ಕಾರ್ಯಕ್ರಮ
ಔರಾದ : ಅ.4:ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಹಾಗೂ ಕೇತಕಿ ಸಂಗಮೇಶ್ವರ ನಾಟ್ಯ ಕಲಾ ಸಂಘ ಸಂಸ್ಥೆ ಬೇಲ್ದಾಳ ಇವರ ಸಂಯುಕ್ತ ಆಶ್ರಯದಲ್ಲಿ ಮಸ್ಕಲ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮ ನೆರವೇರಿತು.
ತಾಲೂಕಿನ ಮಸ್ಕಲ ಗ್ರಾಮದ ಹನುಮಾನ ಮಂದಿರದಲ್ಲಿ ಶ್ರಾವಣ ಮಾಸದ ಸಮಾರೋಪ ಸಂದರ್ಭ ವಿಶೇಷ ಮಹಾರುದ್ರಾಭಿಷೇಕ ಕಾರ್ಯಕ್ರಮ ಜೊತೆಗೆ ಶ್ರೀ ಕೇತಕಿ ಸಂಗಮೇಶ್ವರ ನಾಟ್ಯ ಕಲಾ ಸಂಘದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು, ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾವಿದರಿಗೆ ಗ್ರಾಮಸ್ಥರಿಂದ ಸನ್ಮಾನ ಜರುಗಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಪಾಟೀಲ, ಶರಣಪ್ಪಾ ಹಟಕರ, ರತಿಕಾಂತ ಹಟಕರ, ಹಾರ್ಮೋನಿಯಂ ವಾದಕ ಗಂಗಾಧರ, ನಾಗೇಶ ಮಡಿವಾಳ, ಅಯ್ಯಾಪ ಸ್ವಾಮಿ, ಸಂಗಮೇಶ ಬೇಲ್ದಾಳ, ಶರಣು ಚಾಂಬೋಳೆ, ವಿಶ್ವನಾಥ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.