ಸಿದ್ದರಾಮಯ್ಯ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ ಸಂಪತ್ತಕುಮಾರ ಶೆಟ್ಟಿ ಆರೋಪ
ಅಥಣಿ: ಅ.4:ಕಾಂಗ್ರೆಸ್ಸ್ ನೇತೃತ್ವದ ಸಿದ್ದರಾಮಯ್ಯನವರ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ ಮುಡಾ ಪ್ರಕರಣದಲ್ಲಿ ತಾವೇ ನ್ಯಾಯಾಧೀಶರಂತೆ ವರ್ತಿಸುತ್ತಿದ್ದಾರೆ, ಹೀಗೆ ವರ್ತಿಸಿದರೆ ಪ್ರಕರಣದ ಸತ್ಯ ಅಸತ್ಯತೆಯನ್ನು ಅರಿಯಲು ಹೇಗೆ ಸಾಧ್ಯವಾಗುತ್ತದೆ. ತಕ್ಷಣವೇ ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ನ್ಯಾಯ ಸಮ್ಮತ ತನಿಖೆಗೆ ಸಹಕರಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಸಂಪತಕುಮಾರ್ ಶೆಟ್ಟಿ ಹೇಳಿದರು.
ಅವರು ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹಲವು ಹಗರಣಗಳು ಬೆಳಕಿಗೆ ಬಂದಿದ್ದು ಅವುಗಳ ನಿಷ್ಪಕ್ಷಪಾತ ತನಿಖೆ ಆಗಬೇಕಾದರೆ ಸಿಎಂ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಆಗ್ರಹಿಸಿದರು, ಅಲ್ಲದೆ ಹಿಂದಿನ ಮಾಜಿ ಶಾಸಕರುಗಳಾದ ಶಹಾಜಹಾನ್ ಡೊಂಗರಗಾಂವ ಹಾಗೂ ಮಹೇಶ ಕುಮಟಳ್ಳಿ ಅವರು ಮಾಡಿರುವ ಯೋಜನೆಗಳನ್ನು ತಮ್ಮದು ಎಂದು ಲೇಬಲ್ ಹಚ್ಚಿಕೊಳ್ಳುವ ಕಾರ್ಯವನ್ನು ಸ್ಥಳೀಯ ಶಾಸಕರು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲಿ ಹಲವು ಕಾರ್ಯಗಳು ನಡೆಯುತ್ತಿದ್ದರು ಅವುಗಳನ್ನ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕರು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಪಕ್ಷದ ಮುಖಂಡ ಪ್ರಭಾಕರ್ ಚವಾಣ ಅವರು ರಾಜ ಹಾಗೂ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನವನ್ನು ಮಾಡಲಾಗುತ್ತಿದ್ದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಸದಸ್ಯತ್ವ ಮಾಡಿಕೊಳ್ಳುವ ಅಭಿಯಾನಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಮುರುಗೇಶ ಕುಮಟಳ್ಳಿ. ಧರೇಪ್ಪ ಠಕ್ಕಣ್ಣವರ, ದಿಲೀಪ್ ಕಾಂಬಳೆ. ಅನಿಲ ಭಜಂತ್ರಿ. ಶಿವಪ್ರಸನ್ (ಪುಟ್ಟು) ಹಿರೇಮಠ. ವಿರೇಂದ್ರ ಕಾಗವಾಡೆ. ನ್ಯಾಯವಾದಿ ಪ್ರಕಾಶ್ ಮೋರೆ. ನಿಂಗಪ್ಪ ಖೋಖಲೆ, ಮಲ್ಲಪ್ಪ ಹಂಚಿನಾಳ. ಮಲ್ಲಿಕಾರ್ಜುನ ಅಂದಾನಿ. ರಾಜು ಡವರಿ. ಇಮ್ತಿಯಾಜ್ ಹಿಪ್ಪರಗಿ. ಶಿವಾನಂದ ಐಗಳಿ. ಅಶೋಕ ಯಲ್ಲಡಗಿ. ಸಿದ್ದು ಪಾಟೀಲ. ಮಲ್ಲಿಕಾರ್ಜುನ ಅಂದಾನಿ. ಇಮ್ತಿಯಾಜ್ ಹಿಪ್ಪರಗಿ. ಶಿವಾನಂದ ಐಗಳಿ. ಅಶೋಕ ಯಲ್ಲಡಗಿ. ಸುರೇಶ ಕೋಳಿ.ಶಿವಲೀಲಾ ಪಟ್ಟಣಶೆಟ್ಟಿ. ರೇಖಾ ಬಳ್ಳೂಳಿ. ಶಕುಂತಲಾ ಧಾರೆಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದ್ರಾಕ್ಷಿ ಬೆಳೆ ವಿಮೆ ಪರಿಹಾರದಲ್ಲಿ
ಲೋಪದೋಷ ಸರಿಪಡಿಸಿ ಮಾಜಿ ಶಾಸಕ ಡೊಂಗರಗಾಂವ ಆಗ್ರಹ
ಅಥಣಿ : ಭೀಕರ ಬರಗಾಲ ಹಾಗೂ ಹವಾಮಾನ ವೈಪರಿತ್ಯ ಮತ್ತು ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ದ್ರಾಕ್ಷಿ ಬೆಳೆ ಹಾನಿಗೆ ವಿಮೆ ಪರಿಹಾರವನ್ನು ಕೇಂದ್ರ ಸರ್ಕಾರ ಈಗಾಗಲೇ ನೀಡಿದರು ಸಹ ನಮ್ಮ ಅಥಣಿ ಹಾಗೂ ಕಾಗವಾಡ ತಾಲೂಕಿನ ದ್ರಾಕ್ಷಿ ಬೆಳೆ ಹಾನಿ ಭಾರಿ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅಥಣಿ ತಾಲೂಕಿನಲ್ಲಿ ಸುಮಾರು 15 ಸಾವಿರ ಎಕರೆ ಭೂಮಿ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದರು ಪರಿಹಾರ ಕೇವಲ 40 ಕೋಟಿ ರೂಪಾಯಿಗಳನ್ನು ಮಾತ್ರ ಮಂಜೂರು ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗಿರುವುದನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರಿ ಮಾಡಬೇಕು. ಅಲ್ಲದೆ ಕೇಂದ್ರ ಸರ್ಕಾರ ದ್ರಾಕ್ಷಿ ಬೆಳೆಗೆ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕೆಂದು ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಆಗ್ರಹಿಸಿದರು.