ಭಾರತ ಸ್ವಾತಂತ್ರ್ಯ ಪಡೆಯಲು ಗಾಂಧಿಜಿ ಕೊಡುಗೆ ಅಪಾರ:ಡಾ.ಎಸ್.ಎಚ್ ಹೊಸಮನಿ
ಆಳಂದ:ಅ.4: ಪಟ್ಟಣದ ಎ.ವಿ ಪಾಟೀಲ ಪದವಿ ಮಹಾ ವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಹಾಗೂ ಸ್ವಚ್ಛತಾ- ಹೀ ಸೇವೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ ಟಿಕಪ್ಪಾ. ಎಂ .ಎನ್ . ಎಸ್. ಎಸ್. ಘಟಕದ ಅಧಿಕಾರಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಚ್ಛತಾ _ ಹೀ ಸೇವೆ ಕಾರ್ಯಕ್ರಮ ಆರಂಭದಿಂದ ಇಲ್ಲಿಯವರೆಗೆ ಕಾಲೇಜಿನಲ್ಲಿ ನಡೆಸಿದ ವಿವಿಧ ಸಾಂಸ್ಕøತಿಕ ಚಟುವಟಿಕೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಚ್ ಹೊಸಮನಿ ಮಾತನಾಡಿ ಗಾಂಧಿಜಿಯವರು ಸ್ವಾತಂತ್ರ್ಯ ದೊರಕಿಸಲು ಅಹಿಂಸಾತ್ಮಕ ತತ್ವದ ಮೂಲಕ ಚಂಪಾರಣ್ಯ ಸತ್ಯಾಗ್ರಹ. ಖೇಡಾ ಸತ್ಯಾಗ್ರಹ. ಅಸಹಕಾರ ಆಂದೋಲನ. ಖಿಲಾಫತ್ ಚಳುವಳಿ. ಸ್ವರಾಜ್ ಮತ್ತು ಉಪ್ಪಿನ ಚಳುವಳಿ. ಕ್ವಿಟ್ ಇಂಡಿಯಾ ಆಂದೋಲನ. ಹತ್ತಿ ಗಿರಣಿ ಚಳುವಳಿ ದಂಡಿ ಉಪ್ಪಿನ ಸತ್ಯಾಗ್ರಹ ಕಾನೂನುಭಂಗ ಚಳುವಳಿಗಳು ಮಾಡುವುದರ ಮೂಲಕ ನಮಗೆ ಗುಲಾಮಗಿರಿಯಿಂದ ಹೊರತರಲು ಸ್ವಾತಂತ್ರ್ಯ ತಂದು ಕೊಡಲು ಅವಿರತ ಪ್ರಯತ್ನ ಪಟ್ಟಿದ್ದಾರೆ ಲಾಲ್ ಬಹದ್ದೂರ್ ಶಾಸ್ತ್ರಿಯವರು ಯವರು ದೇಶ ಕಂಡ ಧೀಮಂತ ಪ್ರಾಮಾಣಿಕ ಸತ್ಯ ಮತ್ತು ಸರಳ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಡಾ. ರಾಜಶೇಖರ್ ಬಾಬನೂರ, ಡಾ.ಬಬ್ರುವಾಹನ,ಬಸವರಾಜ್ ಡಿ ಪಾಟೀಲ್,
ಮಲ್ಲಿಕಾರ್ಜುನ ಬಸವರಾಜ ಶೃಂಗೇರಿ, ಅಂಬ್ರಿಷ್ ಎಂ. ಪ್ರಮೋದ ಡಿ.ಸಿ. ಸುನೀಲ ಹತ್ತಿ,ರವಿ ಕಂಬಾರ,ಶರಣಬಸಪ್ಪ ಗೊಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗಮೇಶ ಸ್ವಾಮಿ ನಿರೂಪಿಸಿದರು. ಮಲ್ಲಿಕಾರ್ಜುನ ಜುಬ್ರೆ ಸ್ವಾಗತಿಸಿದರು. ಅಂಬರೀಷ್ ಕಂಬಾರ ವಂದಿಸಿದರು.