ಸಿಮೆಂಟ್ ಕಾರ್ಖಾನೆಗೆ ಅನುಮತಿ ನೀಡದಂತೆ ಎಸಿಗೆ ಸಾಮಾಜಿಕ ಕಾರ್ಯಕರ್ತರ ಮನವಿ
ಸೇಡಂ, ಅ,04: ಜಿಲ್ಲೆಯ ಚಿತ್ತಾಪೂರ ತಾಲೂಕಿನ ಬೊಮ್ಮನಳ್ಳಿ, ಯರಗಲ್ ಗ್ರಾಮದಲ್ಲಿ ಮೆ? ರಾಮಕೋ ಸಿಮೆಂಟ ಲಿಮಿಟೆಡ್ (M/s.Ramco Cement Ltd.) ಇವರು ದಿನಾಂಕ 08-10-2024ರಂದು ಬೆಳಿಗ್ಗೆ 11 ಗಂಟೆಗೆ ಬೊಮ್ಮನಳ್ಳಿ ಗ್ರಾಮದಲ್ಲಿ ಪರಿಸರ ಸಾರ್ವಜನಿಕ ಸಭೆಯನ್ನು ಇಟ್ಟುಕೊಂಡಿದ್ದು ಇದಕ್ಕೆ ನಮ್ಮ ವಿರೋಧ ವಿದೆ ಎಂದು ಸಾಮಾಜಿಕ ಕಾರ್ಯಕರ್ತ ಗ್ರಾಪಂ ಸದಸ್ಯರಾದ ಉಮೇಶ್ ಪಿ. ಚವ್ಹಾಣ್ ಹಾಗೂ ಸಾಮಾಜಿಕ ಕಾರ್ಯಕರ್ತರು ಸಹಾಯಕ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈಗಾಗಲೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೆಹಲಿ ಇವರು ಘೋಷಿಸಿರುವಂತೆ ಕಲಬುರಗಿ ನಗರವು ಈಗಾಗಲೇ ವಾಯುಮಾಲಿನ್ಯ ನಗರವೆಂದು ಘೋಷಣೆ ಮಾಡಿರುತ್ತಾರೆ. ಕಲಬುರಗಿ ಜಿಲ್ಲಯ ಔದ್ಯೋಗಿಕ ಕಾರ್ಖಾನೆಗಳ ಧಾರಣ ಸಾಮರ್ಥ (Carrying capacity studies) ಬಗ್ಗೆ ನಿರ್ಧರಿಸಲು ಉನ್ನತ ಮಟ್ಟದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಧ್ಯಯನ ಸಮೀತಿ ರಚನೆಯಾಗುವ ವರೆಗೆ ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಸಿಮೆಂಟ ಕಾರ್ಖಾನೆಗೆ ಅನುಮತಿಯನ್ನು ನೀಡದಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.