ಬಾಕಿ ಹಣಕ್ಕಾಗಿ ಕಬ್ಬು ಕಟಾವುದಾರರ ಪ್ರತಿಭಟನಾ ಮೆರವಣಿಗೆ
ಆಲಮೇಲ: ಅ.4:ಕೆಪಿಆರ್ ಸಕ್ಕರೆ ಕಾರ್ಖಾನೆಯು ಕಬ್ಬು ಕಟಾವುದಾರರಿಗೆ ಹೆಚ್ಚುವರಿ ಬಾಕಿ ಹಣ ನೀಡದಿರುವದನ್ನು ಖಂಡಿಸಿ ಕಳೆದ ನಾಲ್ಕುದಿನಗಳಿಂದ ಕಬ್ಬು ಕಟಾವುದಾರರು ದರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲಿಸಿ ಬ್ರಹತ ಪ್ರತಿಭಟನಾ ಮೇರವಣಿಗೆ ಮಾಡಿದರು.
ಕಬ್ಬು ಕಟಾವುದಾರರ ಟ್ಯಾಕ್ಟರ ಮಾಲಿಕರಾದ ಬಸುಗೌಡ ಬಿರಾದಾರ, ಶಶೀಧರ ನಾಯ್ಕೋಡಿ ಮುಂತಾದವರು ಮಾತನಾಡಿ ಸರ್ಕಾರ ನಿದೇರ್ಶನದಂತೆ ಎಪ್‍ಆರ್‍ಪಿ ಪ್ರಕಾರ ಕಬ್ಬು ಕಟವುದಾರರಿಗೆ ಪ್ರತಿ ಟನ್ ಕಬ್ಬಿಗೆ 325ರೂ ನೀಡಿದ್ದು ಹೆಚ್ಚುವರಿಯಾಗಿ 114ರೂ ನೀಡಬೇಕು ಎಂದು ಆದೇಶವಿದು. ಈ ನಿಯಮದಂತೆ ಇಗಾಗಲೆ ಪಕ್ಕದ ಮಾರಾಷ್ಟ್ರದಲ್ಲಿನ ಎಲ್ಲ ಸಕ್ಕರೆ ಕಾರ್ಖಾನೆಗಳು ಮತ್ತು ಕರ್ನಾಟಕ ಅನೇಕ ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿ ಹಣ ನೀಡಿದ್ದು ಆಲಮೇಲ ಕೆಪಿಆರ್ ಕಾರ್ಖಾನೆ ಇನ್ನುವರೆಗೂ ನೀಡಿಲ್ಲ ಕೆಳಿದರೆ ಯಾವುದೆ ಸ್ಪಂದನೆ ಈಡುತ್ತಿಲ್ಲ ಈ ಬಗ್ಗೆ ತಹಶೀಲ್ದಾರ, ಉಪವಿಭಾಗಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದರು ಯಾವುದೆ ಪ್ರಯೋಜನವಾಗದರಿಂದ ಕಳೆದ ನಾಲ್ಕುದಿನಗಳಿಂದ ಕೆಪಿಆರ್ ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರ ಆರಂಬಿಸಿದ್ದೇವೆ. ವಿಷಯ ತಿಳಿದು ಸೋಮವಾರ ಇಂಡಿ ಉಪವಿಭಾಗ ಅಧಿಕಾರಿ ಅಭಿದ ಗದ್ಯಾಳ ದರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳು ಆಲಿಸಿ ಕಾರ್ಖಾನೆ ಅಧಿಕಾರಿಗೋಂದಿಗೆ ಮಾತುಕತೆ ಮಾಡಿದ್ದರು ಯಾವುದೆ ಪ್ರಯೋಜನವಾಗಿಲ್ಲ.
ನಮ್ಮ ಬೇಡಿಕೆ ಇಡೇರುವವರೆಗೂ ಧರಣಿ ಸತ್ಯಾಗ್ರ ಮುಂದುವರೆಯುವದು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವದು ಎಂದು ಹೇಳಿದರು.
ರಾಜ್ಯ ರೈತ ಸಘದ ಜಿಲ್ಲಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ ಕಬ್ಬು ಕಟಾವುದಾರರಿಗೆ ಎಪ್‍ಆರ್‍ಪಿ ಪ್ರಕಾರ ಹಣ ನೀಡಬೇಕು ಅದು ಇಗಾಗಲೆ ಮಹಾರಾಷ್ಟ್ರ, ಕರ್ನಾಟಕದ ಅನೇಕ ಕಾರ್ಖಾನೆಗಳು ಮತ್ತು ಪಕ್ಕದ ಅಫಜಲಪೂರ ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆ ಎಪ್‍ಆರ್‍ಪಿ ಪ್ರಕಾರ ಹೆಚ್ಚುವರಿ ಬಾಕಿ ಹಣ ನೀಡಿದ್ದು, ಕೆಪಿಆರ್ ಸಕ್ಕರೆ ಕಾರ್ಖಾನೆಯವರು ಹೆಚ್ಚುವರಿ ಹಣ ನೀಡದಿರುವದನ್ನು ಖಂಡಿಸಿ ಕಬ್ಬು ಕಟಾವು ಮಾಡಲಿಕರು ಹಮ್ಮಿಕೊಂಡ ಧರಣಿ ಸತ್ಯಾಗ್ರಹಕ್ಕೆ ರಾಜ್ಯ ರೈತ ಸಂಘ ಬೆಂಬಲಿಸಿ ಹೆಚ್ಚಿವರಿ ಹಣ ನೀಡುವವರೆಗೂ ಬಿಡುವದಿಲ್ಲ, ಮೊಂಡ ಹಟ ಮಾಡಿದರೆ ಮುಂದಿನ ದಿನಗಳಲ್ಲಿ ಉಘ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಂಗಳವಾರ ಕಬ್ಬು ಕಟಾವು ದಾರರ ಟ್ಯಾಕ್ಟರ ಮಾಲಿಕರು ನೂರಾರು ಟ್ಯಾಕ್ಟರಗಳೊಂದಿಗೆ ಬ್ರಹತ್ ಪ್ರತಿಭಟನಾ ಮೇರವಣಿಗೆ ಹಮ್ಮಿಕೊಂಡಿದ್ದು ಈ ಮೇರವಣಿಗೆಯು ಸಿಂದಗಿ ರಸ್ತೆಯ ಎ.ಕೆ. ನಂದಿ ಶಾಲೆಯಿಂದ ಆರಂಬಿಸಿ ಬಸ್ ನಿಲ್ದಾಣದಲ್ಲಿ ಒಂದು ಗಂಟೆಗಳ ಕಾಲ ಮಾನವ ಸರ್ಪಳಿ ನಿರ್ಮಿಸಿ ಸಂಪೂರ್ಣ ರಸ್ತೆ ಸಂಚಾರ ಬಂದಗೊಳಿಸಿ ಬ್ರಹತ್ ಪ್ರಟಿಭಟನೆ ಮಾಡಿದರು. ಈ ಪ್ರತಿಭಟನೆಗೆ ರಾಜ್ಯ ರೈತ ಸಂಘ ಬೆಂಬಲಿಸಿ ಪಾಲ್ಗೊಂಡಿದ್ದರು.
ದರಣಿ ಸತ್ಯಾಗ್ರದಲ್ಲಿ ಬಸುಗೌಡ ಬಿರಾದಾರ, ಶಶಿಧರ ನಾಯ್ಕೋಡಿ, ಮಾಂತು ಕತ್ತಿ, ರಾಜು ಮೇತ್ರಿ, ರಾಜು ಬಿರಾದಾರ, ಖಾಜಪ್ಪ ಜಮಾದಾರ, ಲಕ್ಷ್ಮಣ ಗುಡ್ಡಳ್ಳಿ, ಧಶರಥ ಲಾವಟೆ, ದಯಾನಂದ ತೆಗ್ಗೆಳ್ಳಿ ಮುಂತಾದವರು ಇದ್ದರು.