ವನಸಿರಿ ಪೌಂಡೇಶನ್: ಹಕ್ಕಿ-ಪಕ್ಷಿಗಳಿಗೆ ಗುಟುಕು ಉದ್ಘಾಟನೆ
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೫- ವನಸಿರಿ ಫೌಂಡೇಶನ್ ರಾಜ್ಯ ಘಟಕದ ಭಾಗವಾಗಿ ಸಿಂಧನೂರು ನಗರದ ಅಗ್ನಿ ಶಾಮಕ ಠಾಣೆಯಲ್ಲಿ ಬೆಸಿಗೆಯ ಹಕ್ಕಿ – ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆಗಳ ಉದ್ಘಾಟನೆ ಹಾಗೂ ಅಗ್ನಿಶಾಮಕ ಅಧಿಕಾರಿ ,ಸಿಬ್ಬಂದಿ ಗಳಿಗೆ ಸನ್ಮಾನ ಸಮಾರಂಭ ಇಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಎಚ್.ಕಂಬಳಿ ಪಕ್ಷಿಗಳು ನಮ್ಮನ್ನು ರಕ್ಷಣೆ ಮಾಡುವ ಪಾಲನೆ ಪೋಷಣೆ ಮಾಡುವರ್ಯಾರು ಎಂದು ಪ್ರಾಣಿ- ಪಕ್ಷಿಗಳು ಆತಂಕ ಪಡುವಂತಹ ಸಂದರ್ಭದಲ್ಲಿ ಆಗ ಉದಯಿಸಿದ್ದೆ ಸಿಂಧನೂರು ತಾಲುಕಿನ ಮಲ್ಲಾಪುರ ಗ್ರಾಮದ ಅಮರೇಗೌಡ ಅವರು ವನಸಿರಿ ಮೂಲಕ ಗಿಡ ,ಮರಗಳ ರಕ್ಷಣೆ, ಪ್ರಾಣಿ ಪಕ್ಷಿಗಳು ಸಂಕುಲ ಉಳಿಸುವುದು.’ ಏಪ್ರಿಲ್ ಪೂಲ್ ಅಲ್ಲ ಏಪ್ರಿಲ್ ಕೂಲ್ ಎಂದು ತಿಳಿಸಿದ ಮತ್ತು ಹಣ್ಣು ತಿಂದು ಬಿಸಾಡಿದ ಬೀಜಗಳನ್ನು ಎತ್ತಿಟ್ಟು ಸಸಿಗಳನ್ನು ಹಾಕಿದ್ದು ಕೂಡ ವಿಶೇಷ ಇದು ಆತನ ಪೂರ್ಣ ಕಾಲಿಕ ಕೆಲಸವಾಗಿದೆ. ಈ ವಿಶಿಷ್ಠ ವ್ಯಕ್ತಿಗೆ ವಿಶಿಷ್ಠ ಧನ್ಯವಾದಗಳನ್ನು ತಿಳಿಸಿದರು.
ಬಂಗಾರಿ ಕ್ಯಾಂಪ್ ಸಿದ್ದ ರಾಮೇಶ್ವರ ಶರಣರು ,ರೌಡಕುಂದಾ ಸಂಸ್ಥಾನ ಮಠದ ಪಿಠಾಧಿಪತಿ ಮರಿಬಸವ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶಿವನಗೌಡ ಗೋರೆಬಾಳ, ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಸೋಮನಗೌಡ ಬಾದರ್ಲಿ, ಡಾ.ಶರಣಬಸವ ದೇವರಡ್ಡಿ , ಹಾರುನ್ ಸಾಬ್, ಬಸವರಾಜ ಸಾಹುಕಾರ ವಕೀಲರು, ಅಯೂಬ್ ಕಾನ್, ಡಾ.ನಾಗರಾಜ, ವೀರಭದ್ರಪ್ಪ ಕುರುಕುಂದಾ , ಪಾಟೀಲ್ ,ಟಿ.ಎನ್ ಲಾಜರ್ ಸಿರಿಲ್ ,ಕಾರುಣ್ಯಾಶ್ರಮ ಚನ್ನಬಸವ ಸ್ವಾಮಿ ,ಶಂಕ್ರಗೌಡ ಎಲೆಕೂಡ್ಲಿಗಿ, ಮಲ್ಲಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರದ ಐ.ಕ್ಯೂ ಇಂಟರ್ ನ್ಯಾಶನಲ್ ಶಾಲಾ ಮಕ್ಕಳು, ಸನ್ ರೈಸ್ ನರ್ಸಿಂಗ್ ಕಾಲೇಜು, ನ್ಯಾಶನಲ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಇದೇ ಸಂದರ್ಭದಲ್ಲಿ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನು ಸನ್ಮಾನಿಸಿ ಗೌರವಿಸಿದರು.