ಅತ್ಯಾಚಾರ ಸಾಬೀತು: ಅಪರಾಧಿಗೆ ಹತ್ತು ವರ್ಷ ಜೈಲು: ೨೦ ಸಾವಿರ ರೂ.ದಂಡ
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೫- ತುರವಿಹಾಳ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಕ್ಕೆ ಸಂಬಂಧಿಸಿದಂತೆ ೨೦೧೭ ರಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣದ ವಾದ ವಿವಾದಗಳನ್ನು ಪರಿಶೀಲಿಸಿದ ಮೂರನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಬಿ ಜಕಾತಿ ಅವರು ಅಪರಾಧಿಗೆ ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೨೦ ಸಾವಿರ ರೂ ದಂಡ ವಿಧಿಸಿ ೪-೩-೨೦೨೪ ರಂದು ನ್ಯಾಯಾಲಯದ ತೀರ್ಪು ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಸದ್ರಿ ಪ್ರಕರಣ ಆರೋಪಿತನಾದ ತಿಮ್ಮಯ್ಯ ೨೩-೦೨-೨೦೧೭ ರಂದು ಮಧ್ಯಾಹ್ನ ೧-೩೦ ಗಂಟೆಗೆ ಪಿರ್ಯಾಧಿದಾರನ ಮಗಳಾದ ಚಾಸಾ ೧ ಬುದ್ದಿಮಾಂದ್ಯಳಿದ್ದು, ಮನೆಯಲ್ಲೇ ಒಬ್ಬಳೆ ಇದ್ದಾಗ ಅವಳ ಮೇಲೆ ಬಲಾತ್ಕಾರ ಮಾಡಿದ್ದರಿಂದ ಅವನ ವಿರುದ್ಧ ತುರವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾದನ್ವಯ ಆರೋಪಿತನ ವಿರುದ್ದ ತನಿಖಾಧಿಕಾರಿಗಳಾದ ಸಿಪಿಐ ರಮೇಶ ರೊಟ್ಟಿ ತನಿಖೆ ಕೈಗೊಂಡು ದೋಷರೂಪ ಪಟ್ಟಿ ಸಲ್ಲಿಸಿದ್ದರು.
ಮೂರನೇ ಅಧಿಕ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ರಾಯಚೂರು ಪೀಠಾಸನ ನ್ಯಾಯಾಧೀಶರಾದ ಬಿ.ಬಿ ಜಕಾತಿ ಯವರು ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ದಿ.೪ ರಂದು ಆರೋಪಿತನು ಅಪರಾಧ ಎಸಗಿದ್ದಾನೆಂದು ಪರಿಗಣಿಸಿ ಆರೋಪಿತನಿಗೆ ಹತ್ತು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೨೦ ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದು ಇರುತ್ತದೆ.ಸರ್ಕಾರದ ಪರವಾಗಿ ಆರ್.ಎ ಗಡಕರಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ. ಹಾಗೂ ಪಿ.ಸಿ ಪಂಪಾಪತಿ ನ್ಯಾಯಾಲಯಕ್ಕೆ ಸಾಕ್ಷಿ ದಾರ ರನ್ನು ಹಾಜರುಪಡಿಸಿರುತ್ತಾರೆಂದು ತಿಳಿಸಿದರು.