ಖಾಲಿ ಗಾಡಾ ಓಡಿಸುವ ಸ್ಪರ್ಧೆ
ಲಕ್ಷ್ಮೇಶ್ವರ,ಮಾ5 : ಲಕ್ಷ್ಮೇಶ್ವರ ನಗರದಲ್ಲಿ ವೀರ ಸಂಗೊಳ್ಳಿ ಅಭಿಮಾನಿಬಳಗದಿಂದ ಶಿವರಾತ್ರಿ ಪ್ರಯುಕ್ತ ದ್ವಿತೀಯ ಬಾರಿಗೆ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯನ್ನು ಮಾರ್ಚ್ 6 ಬುಧವಾರ ಏರ್ಫಡಿಸಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಬಳಗದ ಜಿಲ್ಲಾದ್ಯಕ್ಷ ಬಸವರಾಜ ಹಿರೇಮನಿ ತಾಲೂಕ ಅಧ್ಯಕ್ಷ ಸುರೇಶ ಹಟ್ಟಿ ಹೇಳಿದರು
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಅಂದು ಬೆಳಿಗ್ಗೆ 8ಕ್ಕೆ ಸ್ಪರ್ಧೆಗೆ ಚಾಲನೆ ದೊರೆಯಲಿದ್ದು, ಸ್ಥಳ ದೊಡ್ದುರ ರೋಡಎಮ್ ಜಿ ಎಮ್ ಸ್ಕೂಲ ಹತ್ತಿರ ಉಳ್ಳಟ್ಟಿ ಕ್ರಾಸನಲ್ಲಿ ಜಮಿನುನಲ್ಲಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದೆ ಒಂದು ನಿಮಿಷದ ಸ್ಪರ್ಧೆ ಇದಾಗಿದು ವಿವಿಧ ಜಿಲ್ಲೆಗಳಿಂದ ನೂರಾರು ಗಾಡಾ ಸ್ಪರ್ಧೆಗೆ ರೈತರು ಬರುತ್ತಾರೆ ಸುಮಾರು 70 ಕ್ಕಿಂತ ಹೆಚ್ಚು ತಂಡಗಳು ಹೆಸರು ನೋಂದಾಯಿಸಿದ್ದು ಗೆದ್ದ ಖಾಲಿ ಗಾಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಇದೆ.
ಈ ಸಂದರ್ಭದಲ್ಲಿ ಮಂಜುನಾಥ ಮುಳುಗುಂದ, ಬಸವರಾಜ ಕಲ್ಲೂರ ಭರಮಪ್ಪ ಶೇರಸೂರಿ, ನೀಲಪ್ಪ ಬಸಾಪುರ ಮಹೇಶ ಸೂರಣಗಿ, ಪರಶು ಹೋರಿ,ಸೋಮು ಬಳಗಾನೂರ,ಮೈಲಾರಿ ಹೆಗ್ಗಣ್ಣನವರ ಮುತ್ತು ಪೂಜಾರ,ಪ್ರವೀಣ ಕಟ್ಟಿಮನಿ,ಅಭಯ ಮಾಣಿಕ, ಸಂಘಟಕರು ಇದ್ದರು.