ಬಂಡವಾಳಶಾಹಿಗಳಿಗೆ ರೈತರ ಕೃಷಿ ಭೂಮಿ ಬೇಡ- ವಿ.ಎಸ್. ಶಿವಶಂಕರ್
ಸಂಜೆವಾಣಿ ವಾರ್ತೆ
ಸಂಡೂರು:ಮಾ: 5:  ಹಲವಾರು ದಶಕಗಳಿಂದ ಅರಣ್ಯದ ಅಂಚಿನ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಹಕ್ಕು ಸಮಿತಿ ಅಡಿಯಲ್ಲಿ ಹಕ್ಕು ಪತ್ರ ನೀಡಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಒತ್ತಾಯಿಸಿದರು.
ಅವರುಪಟ್ಟಣದ ನಿಸರ್ಗ ಸಮುದಾಯಭವನದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ತಾಲೂಕಿನಾದ್ಯಂತ ಒಟ್ಟು 3201 ಅರ್ಜಿಗಳನ್ನು ತಾಲೂಕಿನ ರೈತರು ಸಲ್ಲಿಸಿದ್ದಾರೆ, 989 ಅರ್ಜಿಗಳು ಗ್ರಾಮ ಮಟಟದ ಸಭೆಯಲ್ಲಿ ಅನುಮೋದನೆ ಗೊಂಡಿದ್ದು ಉಳಿದ 2212 ಅರ್ಜಿಗಳನ್ನು ಕಾಯಿದೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯ ಕೊರೆತಯಿಂದಾಗಿ ತಿರಸ್ಕರಿಸಲಗಿದೆ. ಸರ್ವೋಚ್ಛ ನ್ಯಾಯಲವು ಅರ್ಜಿಗಳನ್ನು ಪುನರ್ ಪರಿಶೀಲನೆ ಅದೇಶ ನೀಡಿದರೂ ಸಹ ಯಾವು ಅಧಿಕಾರಿಯೂ ಸಹ ಇಲ್ಲಿಯವರೆಗೆ ಈ ಕಾರ್ಯವನ್ನು ಮಾಡಿಲ್ಲ, ಮತ್ತು ಪೂರ್ಣಗೊಳಿಸುತ್ತಿಲ್ಲ ಇದರಿಂದ ರೈತರು ಅತ್ತ ಜಮೀನು ಇಲ್ಲ, ಇತ್ತ ಪಟ್ಟಾವೂ ಸಹ ಇಲ್ಲ ಎನ್ನುವ ಅತಂತ್ರ ಸ್ಥಿತಿಗೆ ಸಿಲುಕಿದ್ದು ಅವರ ರಕ್ಷಣೆಯನ್ನು ಮಾಡುವುದು ಅತಿ ಅಗತ್ಯವಾಗಿದೆ, ಅದರೆ ಸರ್ಕಾರ ಇಂದು ರೈತರು ಉಳುಮೆ ಮಾಡುವ ಭೂಮಿಯನ್ನು ಪರಿಶೀಲನೆ ಮಾಡದೇ, ಅನುಮೋದನೆ ಗೊಂಡ ರೈತರಿಗೆ ಜಮೀನು ನೀಡದೆ ಇರುವುದು ಸರಿಯಲ್ಲ, ಬದಲಿಗೆ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಹೆಕ್ಟರ್ ಗಟ್ಟಲೆ ಜಮೀನುಗಳನ್ನು ನೀಡುತ್ತಿರುವುದು ಖೇಧಕರ ಸಂಗತಿಯಾಗಿದೆ, ಇಂತಹ ಅಕ್ರಮವಾದ, ಬಂಡವಾಳಶಾಹಿ ಧೋರಣೆಯಿಂದ ರೈತರು ಕಷ್ಟಕ್ಕೆ ಸಿಲುಕುತ್ತಿದ್ದಾರೆ, ಇದರ ಜೊತೆಗೆ ಇದ್ದ ಅರಣ್ಯವೂ, ಗೋಮಾಳದ ಜಾಗಗಳು, ಕಾಡು ಪ್ರಾಣಿಗಳು ಇಲ್ಲದಂತಹ ದುಸ್ಥಿತಿ ಉಂಟಾಗುತ್ತಿದೆ, ದನಕರುಗಳಿಗೆ ಮೇಯಲು ಆಹಾರವೂ ಸಹ ಇಲ್ಲದಂತಹ ದುಸ್ಥಿತಿ ಉಂಟಾಗುತ್ತಿದೆ ಅದ್ದರಿಂದ ತಕ್ಷಣ ಸರ್ಕಾರ ಎಚ್ಚೆತ್ತು ಕೊಂಡು ನಿಜವಾದ ರೈತರನ್ನು ಗುರುತಿಸಿ ಅವರಿಗೆ ಹಕ್ಕು ಪತ್ರ ಕೊಡಲೇ ಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ.
ಸಿ.ಐ.ಟಿ.ಯು.ಸಿ ಸಂಘದ ಜಿಲ್ಲಾಧ್ಯಕ್ಷ ಸತ್ಯಬಾಬು ಅವರು ಮಾತನಾಡಿ ರೈತರಿಗೆ ಪಟ್ಟಾನೀಡಿ ಇಲ್ಲವೆ ಅಧಿಕಾರದಿಂದ ಕೆಳಗೆ ಇಳಿಯಿರಿ, ಸದನದಲ್ಲಿಯೇ ತಿಳಿಸಿದರೂ ಸಹ ಅಧಿಕಾರಿಗಳು ಕೊಂಕು ಹುಡುಕುತ್ತಿದ್ದಾರೆ, ಅಲ್ಲದೆ ಮಾಹಿತಿ ಇಲ್ಲವೆನ್ನುತ್ತಿದ್ದಾರೆ ಇನ್ನೂ ರೈತರು ಎಲ್ಲಿಗೆ ಹೋಗಬೇಕು, ಅವರ ವ್ಯವಸ್ಥಿತವಾದ ಒಕ್ಕಲೆಬ್ಬಿಸುವುದನ್ನು ತಡೆಯಬೇಕು, ಅವರ ಜೀವಕ್ಕೆ ಕೃಷಿ ಭೂಮಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಮುಖಂಡರಾದ ಎ.ಸ್ವಾಮಿ. ಹೆಚ್.ದುರುಗಮ್ಮ, ಶಂಕ್ರಪ್ಪ, ಸಯ್ಯದ್ ಷರೀಫ್, ಎಸ್. ಕಾಲೂಬಾ, ವಿ.ದೇವಣ್ಣ, ಎನ್. ಎಲ್ಲಾಲಿಂಗಪ್ಪ, ಸಿದ್ದಪ್ಪ, ನಿಂಗಯ್ಯ, ತಿರುಪತಿ ಕಲ್ಲಪ್ಪ, ನಾಗರಾಜ, ಹೊನ್ನೂರಸ್ವಾಮಿ, ಹಂಪಮ್ಮ, ಪಂಪನಗೌಡ, ಕೃಷ್ಣಪ್ಪ ಇತರ ಹಲವಾರು ಗ್ರಾಮಗಳ ರೈತರು ಉಪಸ್ಥಿತರಿದ್ದರು.