ಮನುಷ್ಯ ಸುರಕ್ಷತೆಗೆ ಗಮನ ನೀಡಲು ಕರೆ
ಸಂಜೆವಾಣಿ ವಾರ್ತೆ
ಸಂಡೂರು:ಮಾ: 5: ಮಗು ಜನಿಸಿದ ತಕ್ಷಣ ಅದರ ಸುರಕ್ಷತೆ ಅತಿ ಅಗತ್ಯ, ಅಜಾಗರುಕತೆ ಉಂಟಾದರೆ ಅವಘಡ ಸಂಭವಿಸುತ್ತವೆ, ಅದೇ ರೀತಿ ಸಮಾಜದಲ್ಲಿ ಅನೇಕ ರೀತಿಯ ಅಪಘಾತಗಳು ಸಂಭವಿಸುತ್ತವೆ ಅದ್ದರಿಂದ ಸುರಕ್ಷತೆ ಬಹು ಮುಖ್ಯವಾಗಿದ್ದು ಎಲ್ಲರೂ ಸಹ ಸುರಕ್ಷತೆಯ ಕಡೆ ಗಮನಹರಿಸಬೇಕು ಎಂದು ಅರ್.ಸಿ.ಪಿ.ಎಲ್. ಕಂಪನಿಯ ಮುಖ್ಯಸ್ಥರಾದ ಬಿ.ನಾಗನಗೌಡ ತಿಳಿಸಿದರು.
ಅವರು ತಾಲೂಕಿನ ಯಶವಂತನಗರದ ಹತ್ತಿರ ಇರುವ ಅರ್.ಸಿ.ಪಿ.ಎಲ್. ಸ್ಟೀಲ್ ಪ್ಲಾಂಟ್‍ನಲ್ಲಿ ಹಮ್ಮಿಕೊಂಡಿದ್ದ 52ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಒಬ್ಬರ ಸಾವು ಬರೀ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಅದು ಸಮಾಜಕ್ಕೆ, ದೇಶಕ್ಕೆ, ಅತ ಮಾಡುವ ಕಂಪನಿಗೆ, ಸ್ನೇಹಿತರಿಗೆ, ಬಂಧುಗಳಿಗೂ ನಷ್ಟವಾಗುತ್ತದೆ, ಇಂದು ಬಹಳಷ್ಟು ಸಂದರ್ಭದಲ್ಲಿ ಅಪಘಾತಗಳು ಸಂಭವಿಸುತ್ತಿವೆ ಅದರೆ ಸುರಕ್ಷತಾ ಕ್ರಮಗಳನ್ನು ನಾವು ನಿರ್ವಹಿಸದೇ ಇರುವುದು ಅದ್ದರಿಂದ ಪ್ರತಿಯೊಬ್ಬರೂ ಸಹ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಕಾರ್ಖಾನೆಯ ಅವರಣದಲ್ಲಿ ಕಡ್ಡಾಯವಾಗಿ ರಕ್ಷಾ ಕವಚಗಳನ್ನು ಹಾಕಿಕೊಳ್ಳಬೇಕು, ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು, ಮುಂಜಾಗ್ರತೆ ಅತಿ ಅಗತ್ಯವಾದುದು, ಬುದ್ದ ಹೇಳುವಂತೆ ಸಾವಿಲ್ಲದಾ ಮನೆಯಿಂದ ಸಾಸಿವೆ ತಾರಮ್ಮ, ಮಗುವನ್ನು ಬದುಕಿಸುವೆ ಎಂದಾಗ ತಾಯಿ ತನ್ನ ಮಗು ಸತ್ತಿದ್ದು ಅದನ್ನು ಬದುಕಿಸಲು ಎಲ್ಲಾ ಮನೆಗೆ ಹೋಗುತ್ತಾಳೆ ಅದರೆ ಸಾವಿಲ್ಲದೆ ಮನೆಯೇ ಇಲ್ಲವಾಗುತ್ತದೆ, ಅಂದರೆ ಹುಟ್ಟು ಸಾವು ಖಚಿತ ಅದರೆ ಸುರಕ್ಷತೆಯನ್ನು ನಿಶ್ಚಿತವಾಗಿ ಬಳಸಿ ಎಂದು ಕರೆನಿಡಿದರು.
ಅರ್.ಸಿ.ಪಿಎಲ್. ಪ್ಲಾಂಟ್ ಮುಖ್ಯ ವ್ಯವಸ್ಥಾಪಕರಾದ ಉಮೇಶ್ ಭಟ್ ಮಾತನಾಡಿ ಬಹಳಷ್ಟು ಸುರಕ್ಷತಾ ಕ್ರಮಗಳನ್ನು ವಹಿಸಿಕೊಂಡು ಕಾರ್ಯನಿರ್ವಹಿಸಿದರೂ ಸಹ ಅಪಘಾತಗಳು, ಅವಘಡಗಳು ಸಂಭವಿಸುತ್ತವೆ, ಅದರೆ ಎಚ್ಚರಿಕೆ ಮತ್ತು ಸುರಕ್ಷತೆಯಿಂದ ಕಾರ್ಯನಿರ್ವಹಿಸಿದಾಗ ಇವುಗಳನ್ನು ತಪ್ಪಲಿಸಲು ಸಾಧ್ಯ, ಅದ್ದರಿಂದ ಕಾರ್ಮಿಕರು ಹೆಚ್ಚು ಸುರಕ್ಷತೆಯಿಂದ ಕೆಲಸ ಮಾಡಬೇಕು, ವಾಹನ ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕುವ ಮೂಲಕ ಸುರಕ್ಷತೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಂಪನಿಯ ನಿರ್ದೇಶಕರಾದ ಬಿ.ವಿನಾಯಕ್, ಸಿಬ್ಬಂದಿಗಳಾದ ಗಿರಿಧರ್ ಮ್ಯಾಕನಿಕ್.ಹೆಚ್.ಅರ್, ರಮೇಶ್, ವ್ಯವಸ್ಥಾಪಕರು, ಬಿಕೆಜಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ರಾಜಶೇಖರ ಬೆಲ್ಲದ್ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
One attachment • Scanned by Gmail