ಅವಿರೋಧ ಆಯ್ಕೆ
ಬ್ಯಾಡಗಿ,ಮಾ5: ತಾಲೂಕಿನ ಮಾಸಣಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯಲ್ಲಪ್ಪ ಗಡ್ಡದವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಮಲ್ಲಪ್ಪ ಸಪ್ಪಣ್ಣನವರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸರ್ವ ಸದಸ್ಯರುಗಳ ಒಮ್ಮತದಂತೆ ಯಲ್ಲಪ್ಪ ಗಡ್ಡದವರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಪ್ರಕಾಶ ಬನ್ನಿಹಟ್ಟಿ, ಬಸವರಾಜ ಬನ್ನಿಹಟ್ಟಿ, ಮಲ್ಲಪ್ಪ ಸಪ್ಪಣ್ಣನವರ, ನಿಂಗಪ್ಪ ಹೆಗ್ಗಣ್ಣನವರ, ಶಿವರಾಜ ಬನ್ನಿಹಟ್ಟಿ, ಬಸಪ್ಪ ಕೆಪ್ಪಲಿಂಗಣ್ಣನವರ, ಮಲಕಪ್ಪ ಮುಳಗುಂದ, ಸಿದ್ದಪ್ಪ ಕಾಕೋಳ, ಲಲಿತವ್ವ ಹಿರೇಮತ್ತೂರ, ಬಸನಗೌಡ ಸಣ್ಣಗೌಡ್ರ, ಉಳವೆಪ್ಪ ಕುರುವತ್ತಿ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.