ಮಾ.೯, ಕಲ್ಬುರ್ಗಿ-ಬೆಂಗಳೂರು ಹೊಸ ರೈಲು ಸಂಚಾರ
ರಾಯಚೂರು.ಮಾ.೦೫- ಕಲಬುರಗಿಯಿಂದ ಬೆಂಗಳೂರಿಗೆ ಮಾ.೯ ರಂದು ವಾರದ ಹೊಸ ರೈಲು ಸಂಚಾರಿಸಲಿದೆ ಎಂದು ರೈಲ್ವೆ ಸಲಹಾ ಸಮತಿ ಸದಸ್ಯ ಡಾ. ಬಾಬುರಾವ ಅವರು ತಿಳಿಸಿದ್ದಾರೆ.
ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸದ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬಾಬುರಾವ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಕಲ್ಬುರ್ಗಿಯಿಂದ ಬೆಂಗಳೂರು ನಡುವೆ ಹೊಸ ರೈಲ್ವೆ ಸಂಚಾರದಿಂದ ವಿದ್ಯಾರ್ಥಿಗಳಿಗೆ, ಕೂಲಿಕಾರ್ಮಿಕರು ಮತ್ತು ವಿವಿದ ಕಡೇ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸದ ರಾಜ ಅಮರೇಶ ನಾಯಕ ಮತ್ತು ಕಲ್ಬುರ್ಗಿ ಕ್ಷೇತ್ರದ ಉಮೇಶ ಜಾದವ್ ಅವರು ಭೇಟಿಯಾಗಿ ಮನವಿ ಸಲ್ಲಿಸಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ವಾರದಲ್ಲಿ ಒಂದು ದಿನ ಮಾತ್ರ ಸಂಚಾರಕ್ಕೆ ರೈಲು ಇಲಾಖೆ ಮೊದಲು ಅನುಮತಿ ನೀಡಿದೆ. ಏಪ್ರಿಲ್ ೫ ರ ನಂತರ ಪ್ರತಿ ದಿನವೂ ಸಂಚಾರಿಸಲಿದೆ ಎಂದರು. ಹೊಸ ರೈಲ್ ಸಂಚರಿಸುವುದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ.
ಈ ಭಾಗದ ಜನರು ರೈಲ್ ನಲ್ಲಿ ಎಲ್ಲಿಬೇಕಲ್ಲಿ ಕುಳಿತು ಹೋಗುವ ಪರಿಸ್ಥಿತಿಯಿತ್ತು. ಹೊಸ ರೈಲ್ವೆ ಆರಂಭದಿಂದ ಜನರಿಗೆ ಸಮಸ್ಯೆ ತಪ್ಪಿದಂತಗಿದೆ ಎಂದರು.ಕಲಬುರಗಿಯಿಂದ ಸಂಜೆ ೫ ಗಂಟೆಗೆ ಹೊರಟು ಯಾದಗಿರಿ, ರಾಯಚೂರು ಮತ್ತುಗುಂತಕಲ್ ಮಾರ್ಗವಾಗಿ ಮರುದಿನ ಮುಂಜಾನೆ ೪:೧೫ ಗಂಟೆಗೆ ಬೆಂಗಳೂರು ಸಮೀಪದ ಬೈಯ್ಯಪ್ಪನಹಳ್ಳಿಯಲ್ಲಿನೂತನವಾಗಿ ನಿರ್ಮಾಣಗೊಂಡಿರುವ ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ತಲುಪಲಿದೆ. ಹೊಸ ರೈಲ್ ವಿಶೇಷವಾಗಿ ೨೮ ಬೋಗಿಗಳನ್ನು ಒಳಗೊಂಡಿದೆ. ವಾರದ ರೈಲ್ ಮಾ.೯ರಂದು ಸಂಜೆ ೫ ಗಂಟೆಗೆ ಕಲಬುರಗಿಯಲ್ಲಿ ರೈಲು ಸಂಚಾರದ ಉದ್ಘಾಟನೆಯಾಗಲಿದೆ.