ಗ್ರಾಮ ಘಟಕಗಳ ಉದ್ಘಾಟನೆ
ಬ್ಯಾಡಗಿ,ಮಾ5 : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಜಿಲ್ಲಾ ಅಧ್ಯಕ್ಷ ಹನುಮಂತ ಬೋವಿ ಅವರ ನೇತೃತ್ವದಲ್ಲಿ ಬ್ಯಾಡಗಿ ತಾಲೂಕು ಕಲ್ಲೆದೇವರು ಗ್ರಾಮದಲ್ಲಿ ಗ್ರಾಮ ಘಟಕಗಳ ಉದ್ಘಾಟನೆಯನ್ನು ಮಾಡಲಾಯಿತು.
ತಾಲೂಕು ಘಟಕದ ಮಹಿಳಾ ಉಪಾಧ್ಯಕ್ಷರನ್ನಾಗಿ ಶೋಭಾ ಕಲ್ಲಪ್ಪ ಹೂಗಾರ ಅವರನ್ನು ಆಯ್ಕೆ ಮಾಡಲಾಯಿತು ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಚನ್ನಬಸಪ್ಪ ಹೆಬ್ಬಾಳ, ಉಪಾಧ್ಯಕ್ಷರನ್ನಾಗಿ ಕಲ್ಲಪ್ಪ ಲೆಂಕಪ್ಪನವರ, ಗ್ರಾಮದ ರೈತ ಘಟಕದ ಅಧ್ಯಕ್ಷರನ್ನಾಗಿ ಪರಮೇಶ ಮುಧೋಣ್ಣನವರ, ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ರಾಘವೇಂದ್ರ ಗುಂಡೇನಹಳ್ಳಿ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಶಂಭು ಕಾಕೋಳ, ಆಟೋ ಚಾಲಕರ ಅಧ್ಯಕ್ಷರನ್ನಾಗಿ ಕಲ್ಲಪ್ಪ ಫಕೀರಪ್ಪ ಗುಂಡೇನಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಘಟಕದ ಮಹಿಳಾ ಗೌರವಾಧ್ಯಕ್ಷರನ್ನಾಗಿ ಲತಾ ಈರಪ್ಪ ಚೂರಿ, ಗ್ರಾಮ ಘಟಕದ ಮಹಿಳಾ ಅಧ್ಯಕ್ಷರನ್ನಾಗಿ ದ್ಯಾಮವ್ವ ಕಲ್ಲಪ್ಪ ಮುದೋಣ್ಣನವರ, ಉಪಾಧ್ಯಕ್ಷರನ್ನಾಗಿ ವಿದ್ಯಾ ಕಂಡಮ್ಮನವರ, ಸಹ ಖಜಾಂಚಿಯಾಗಿ ಬಸಮ್ಮ ಸಾವೂರ, ಪ್ರಧಾನ ಕಾರ್ಯದರ್ಶಿಯಾಗಿ ಕವಿತಾ ಭರಡಿ, ಸಂಘಟನಾ ಕಾರ್ಯದರ್ಶಿಯನ್ನಾಗಿ ಗಿರಿಜಮ್ಮ ಹುಲ್ಮನಿ, ಕಾರ್ಯದರ್ಶಿಯನ್ನಾಗಿ ಕಲ್ಲವ್ವ ಗುಂಡೇನಳ್ಳಿ, ಪತ್ರಿಕಾ ಕಾರ್ಯದರ್ಶಿಯಾಗಿ ಗೀತಾ ಕನಕಪ್ಪನವರ, ಪತ್ರಿಕಾ ಸಹ ಕಾರ್ಯದರ್ಶಿಯನ್ನಾಗಿ ಕರಿಯವ್ವ ಮ್ಯಾಗೇರಿ, ಮಹಿಳಾ ರೈತ ಘಟಕದ ಉಪಾಧ್ಯಕ್ಷರನ್ನಾಗಿ ಹನುಮಕ್ಕ ಲೆಂಕಪ್ಪನವರ, ಖಜಾಂಚಿಯಾಗಿ ಕಾವೇರಿ ಮುದುಕಮ್ಮನವರ, ಸಂಚಾಲಕರಾಗಿ ಪಾರವ್ವ ಚೂರಿ, ಸಹ ಸಂಚಾಲಕರಾಗಿ ಕಲಾವತಿ ಮುದುಕಮ್ಮನವರ, ಮಹಿಳಾ ಕಾರ್ಮಿಕ ಘಟಕದ ಉಪಾಧ್ಯಕ್ಷರನ್ನಾಗಿ ಹನುಮವ್ವ ಸೊಟ್ಟಮ್ಮನವರ, ಮಂಜಮ್ಮ ಚಿಕ್ಕಮಠ, ಕಲಾವತಿ ಹುಲಿಗೆಮ್ಮನವರ, ಲಕ್ಷ್ಮಿ ಕಲ್ಲವ್ವ ನೇಕಾರ, ಈರಮ್ಮ ಹಡಪದ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೌಲಾಲಿ ಏರಿಮನಿ, ಮುಖಂಡರಾದ ನೂರಅಹ್ಮದ ಲಕ್ಷ್ಮೇಶ್ವರ, ಮಾದೇವಪ್ಪ ಹೆಡಿಗೊಂಡ, ರಮೇಶ ಸುಂಕದ, ಬಾಹುಬಲಿ ಜೈನರ, ಶರಣಕುಮಾರ ಹಂಚಿನಮನಿ, ಹಾವೇರಿ ತಾಲೂಕು ಅಧ್ಯಕ್ಷ ಯುವರಾಜ ನವಲಗುಂದ, ಬ್ಯಾಡಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೆಮ್ಮಣಕೆರೆ, ಉಪಾಧ್ಯಕ್ಷ ಪ್ರಭು ಪಾಟೀಲ, ಶಾರದಮ್ಮ ಕರೆಯಣ್ಣನವರ, ಚೌಡಮ್ಮ ಬಣಕಾರ, ಹಾವೇರಿ ತಾಲೂಕು ಮಹಿಳಾ ಅಧ್ಯಕ್ಷೆ ರೇಣುಕಾ ಬಡಕಣ್ಣನವರ, ಅಮೃತ ಮಜ್ಗಿ, ಅಶೋಕ ಗದಗ, ಕಿರಣ ಶಿವಮೊಗ್ಗ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು