ಹಾರಕೂಡ ಜಾತ್ರಾ ಮಹೋತ್ಸವ: ಮಾ.11ರಿಂದ ಭಜನಾ ಸ್ಪರ್ಧೆ
ಚಿಂಚೋಳಿ, ಮಾ.5- ಇಲ್ಲಿನ ಸುಪ್ರಸಿದ್ದ ಪರಮ ಪೂಜ್ಯಾ ಲಿಂಗ್ಯಕ್ಯ ಸದ್ಗುರು ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸದಿ ಇದೇ ಮಾರ್ಚ್ 19ರಂದು ಜರಗಲಿದ್ದು, ಈ ಪ್ರಯುಕ್ತ ಭಜನಾ ಸ್ಪರ್ದೆಯನ್ನು ದಿನಾಂಕ 11.03.2024 ರಿಂದ 18.03.2024ರ ಪ್ರತಿ ಮಧ್ಯಾಹ್ನ 1:00ಗೆ ವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಭಜನೆ ಸ್ಪರ್ಧೆಯ ಮಂಡಳಿಯ ಮುಖ್ಯಸ್ಥರದ ಶಂಕರಗೌಡ ಅಲ್ಲಾಪುರ ಅವರು ಮಾಧ್ಯಮ ಜೊತೆಗೆ ಮಾತನಾಡಿದ ಅವರು, ಪರಮ ಪೂಜ್ಯಾ ಲಿಂಗ್ಯಕ್ಯ ಸದ್ಗುರು ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಭಜನಾ ಸ್ಪರ್ದೆ ಏರ್ಪಡಿಸಲಾಗಿದ್ದು ಕರ್ನಾಟಕದ ಎಲ್ಲಾ ಜಿಲ್ಲೆ, ಎಲ್ಲಾ ತಾಲೂಕಿನ ಭಜನೆ ಮಂಡಳಿಯದವರು ಭಾಗವಹಿಸಲು ಅವಕಾಶವಿದ್ದು ಭಜನೆ ಸ್ಪರ್ಧೆಯ ಪ್ರಥಮ ಬಹುಮಾನ 25,000 ಸಾವಿರ ರೂಪಾಯಿಗಳು ಎರಡನೇ ಬಹುಮಾನ 15000 ಸಾವಿರ ರೂಪಾಯಿಗಳು ದ್ವಿತೀಯ ಬಹುಮಾನ 10000 ಸಾವಿರ ರೂಪಾಯಿಗಳು ಇಡಲಾಗಿದೆ ಭಜನಾ ಸ್ಪರ್ಧೆಯಲ್ಲಿ ಕೆಲ ಕಂಡೀಷನ್ನು ಕೂಡ ಅಳವಡಿಸಲಾಗಿದ್ದು ಎಲ್ಲಾ ಭಜನೆ ಮಂಡಳಿಗಳು ಪ್ರತಿಯೊಂದು ಭಜನ ಮಂಡಳಿಗಳು ಪ್ರತಿಯೊಬ್ಬ ಭಜನೆ ಮಂಡಳಿಯ ಸದಸ್ಯರು ಒಂದೇ ಗ್ರಾಮದವರಾಗಿರಬೇಕು ಮತ್ತು ಭಜನೆ ಮಂಡಳಿಯ ಸದಸ್ಯರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು ಹಾಗೂ ಭಜನೆ ಮಂಡಳಿ ಒಂದು ತಂಡದ ಎಂಟು ಜನರ ಸದಸ್ಯರು ಹೊಂದಿರಬೇಕು.
ಜನಪದ ಹಾಡುಗಳು ಅವಕಾಶವಿಲ್ಲ ಶರಣ ಸಾಹಿತ್ಯ ಹಾಗೂ ಅಧ್ಯಾತ್ಮಿಕ ಹಾಡುಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು ಭಜನೆ ಸ್ಪರ್ಧೆಯ ಹೆಚ್ಚಿನ ಮಾಹಿತಿಗಾಗಿ, ಶಂಕರ್ ಗೌಡ ಅಲ್ಲಾಪುರ, 8105345550. ನಾಗರಾಜ ಮಲಕೂಡ್, 9902995990. ನಾಗಣ್ಣ ಐನೋಳಿ,89516705565. ಈ ಫೆÇೀನ್ ನಂಬರಿಗೆ ಸಂಪರ್ಕಿಸಬೇಕೆಂದು ಅವರು ಪ್ರಕಟಣೆ ಮೂಲಕ ವಿನಂತಿ ಮಾಡಿದ್ದಾರೆ