ಬೊಮ್ಮಾ ಕುಟುಂಬಕ್ಕೆ ಪರಿಹಾರ ವಿತರಣೆ
ಸಂಜೆವಾಣಿ ವಾರ್ತೆ
ಹುಣಸೂರು, ಫೆ.05-ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆನೆ ದಾಳಿಗೆ ತುತ್ತಾಗಿ ಇತ್ತೀಚಿಗೆ ಸಾವನಪ್ಪಿದ್ದ ಹೊರಗುತ್ತಿಗೆ ನೌಕರ ಬೊಮ್ಮಾ ಅವರ ಕುಟುಂಬಕ್ಕೆ ಹುಣಸೂರು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವತಿಯಿಂದ ಪರಿಹಾರದ ಹಣ 10 ಲಕ್ಷ ರೂಗಳನ್ನು ವಿತರಿಸಲಾಯಿತ್ತು.
ಈ ಸಂದರ್ಭದಲ್ಲಿ ಶಾಖೆಯ ಉಸ್ತುವಾರಿ ಅಧಿಕಾರಿ ಚಿರಂತನ್ ಹೆಚ್.ಆರ್, ಆಡಳಿತಾಧಿಕಾರಿ ಅವಿನಾಶ್ ರಂಗಸ್ವಾಮಿ, ಶರತ್ ಕೆ.ಎಸ್, ಕಚೇರಿ ಸಹಾಯಕ ಮಹಾದೇವ ಸ್ವಾಮಿ ಮತ್ತು ಸಿಬ್ಬಂದಿ ಪ್ರೇಮ ಹಾಜರಿದ್ದರು.