ಮೂಲಭೂತ ಸೌಲಭ್ಯಗಳನ್ನು ಒದಗಿಸಲು ದಲಿತ ಸೇನೆ ಆಗ್ರಹ
ಕಾಳಗಿ.ಫೆ.5. ತಾಲೂಕಿನ ಕುಡ್ದಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಮೂಲಭೂತ ಸೌಲಭ್ಯಗಳಾದ ನೀರು, ವಿದ್ಯುತ್, ಚರಂಡಿ ರಸ್ತೆ ಅಂಗನವಾಡಿ, ಸಾರಿಗೆ ಹಲವಾರು ಸೌಲಭ್ಯಗಳಿಂದ ವಂಚಿತವಾಗುತ್ತಿದೆ.
ಅಂಗನವಾಡಿ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ಶಾಲೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಹಲವಾರು ವಿದ್ಯುತ್ ಕಂಬಗಳು ಬೀಳುವ ಪರಿಸ್ಥಿತಿಯಲ್ಲಿವೆ. ಶಾಲೆಯ ಕಂಪೌಂಡುಗಳಿಲ್ಲದೆ ಶಾಲೆಯಲ್ಲಿ ರಾತ್ರಿ ಮಧ್ಯಪಾನ ಸೇವಿಸಿ ಬಾಟಲಿ ಬಿಸಾಡುತ್ತಿದ್ದು. ಮಕ್ಕಳ ಮೇಲೆ ಪರಿಣಾಮ ಬೀಡುತ್ತಿದೆ. ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಮತ್ತು ಆರೋಗ್ಯ ಮೇಲೆ ಪರಿಮಾಣ ಬೀಳುತ್ತಿದೆ. ಆದ್ದರಿಂದ ಕುಡ್ದಳ್ಳಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ತಾಲೂಕು ದಲಿತ ಸೇನೆ ವತಿಯಿಂದ ತಹಶೀಲ್ದಾರರಿಗೆ ಮನೆ ಪತ್ರ ಸಲ್ಲಿಸಿದರು.
ದಲಿತ ಸೇನೆ ತಾಲೂಕು ಅಧ್ಯಕ್ಷ ನಾಗರಾಜ ಬೇವಿನಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಖತಲಪ್ಪ ಅಂಕನ, ವಿದ್ಯಾರ್ಥಿ ಒಕ್ಕೂಟ ಜಿಲ್ಲಾಧ್ಯಕ್ಷ ಮೋಹನ ಚಿನ್ನ, ತಾಲೂಕು ಕಾರ್ಯದಕ್ಷ ರಮೇಶ ಕುಡ್ದಳ್ಳಿ, ಅಶೋಕ ಗುತ್ತೇದಾರ, ಶಿವಾನಂದ ಕೇಶ್ವರ, ಮಾರುತಿ ಪೂಜಾರಿ, ಮಹೇಶ ದೇವನ್ ಸೇರಿದಂತೆ ಅನೇಕರಿದ್ದರು.
ಕುಡ್ದಳ್ಳಿ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಅತಿ ವೇಗದಿಂದ ಬರುವ ವಾಹನಗಳಿಂದ ಅನಾಹುತಗಳು ಹೆಚ್ಚಾಗುತ್ತಿರುವ ಪ್ರಯುಕ್ತ ಕೂಡಲೇ ಕುಡ್ದಳ್ಳಿ ಮುಖ್ಯ ರಸ್ತೆಗೆ ಎರಡು ಕಡೆಗೆ ರೋಡ್ ಬ್ರೇಕರ್ ಹಾಕಿಸಬೇಕು.