ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸಲು ಸದಾ ಬದ್ಧ :ಶಾಸಕ ರಾಜುಗೌಡ ಪಾಟೀಲ
ಹೂವಿನಹಿಪ್ಪರಗಿ:ಮಾ.5: ಸಮೀಪದ ಗುಳಬಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಒಂದು ಕೋಟಿ ರೂ, ವೆಚ್ಚದಲ್ಲಿ ಶಾದಿಮಹಲ್[ಸಮುದಾಯ ಭವನ]ದ ಭೂಮಿ ಪೂಜೆಯನ್ನು ಶಾಸಕ ರಾಜುಗೌಡ ಪಾಟೀಲ ನೇರವೆರಿಸಿದರು.
ಹೂವಿನಹಿಪ್ಪರಗಿ : ಮತಕ್ಷೇತ್ರದ ಸವಾರ್ಂಗಿಣ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನು ತರುವ ಮೂಲಕ ಮತಕ್ಷೇತ್ರದಲ್ಲಿ ದಶಕಗಳಿಂದನೆನಗುದಿಗೆ ಬಿದ್ದ ಅನೇಕ ಕಾಮಗಾರಿಗಳನ್ನು ಶೀಘ್ರದಲ್ಲಯೇ ಚಾಲನೆ ನೀಡಲಾಗುವದು ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು. ಹೂವಿನಹಿಪ್ಪರಗಿ ಸಮೀಪದ ಗುಳಬಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಒಂದು ಕೋಟಿ ರೂ, ವೆಚ್ಚದಲ್ಲಿ ಶಾದಿಮಹಲ್ಸ ಮುದಾಯ ಭವನದ ಭೂಮಿ ಪೂಜೆ ನೇರವೆರಿ ಅವರು ಮಾತನಾಡಿದರು ಪ್ರಸ್ತುತ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪ್ರಥಮ ಆದ್ಯತೆ ನೀಡುವ ಮೂಲಕ ಅಂತಹ ಸಮಸ್ಯೆಗಳನ್ನು ತ್ವರಿತವಾಗಿ ಈಡೇರಿಸಲು ಈಗಾಗಲೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತಹ ಯಾವದೇ ಸಮಸ್ಯೆಯಾಗಲಿ ಇನ್ನಿತರ ಯಾವದೆ ಗ್ರಾಮದ ಬೇಡಿಕೆಗಳನ್ನು ಈಡೇರಿಸಲು ಸದಾ ಬದ್ಧನಾಗಿದ್ದೇನೆ. ಗುಳಬಾಳ ಗ್ರಾಮದ ರಸ್ತೆ ಸುಧಾರಣೆಗೆ ಈಗಾಗಲೇ 6 ಕೋಟಿ ಬಿಡುಗಡೆ ಮಾಡಲಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವದು. ಗ್ರಾಮದ ಸಿಸಿ ರಸ್ತೆ, ಒಳಚರಂಡಿ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ ಎಂದ ಅವರು ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಗ್ರಾಮ ಗುಳಬಾಳ ಗ್ರಾಮ ತಾಲೂಕ ಪಂಚಾಯತ್ ಸದ್ಯಸ್ಯೆ ನಿಂದ ಹಿಡಿದು ಶಾಸಕನಾಗುವವರೆಗೂ ಗ್ರಾಮದ ಜನರ ಸಹಕಾರವೆ ನನಗೆ ಆತ್ಮಸ್ಥೆರ್ಯ ತುಂಬಿದೆ ಎಂದರು. ನಾನು ಯಾವತ್ತು ಜಾತಿ ರಾಜಕಾರಣ ಮಾಡಿದವನಲ್ಲ ಮಾಡೋದುಇಲ್ಲ ಅದು ನನ್ನ ಹತ್ತಿರ ಸುಳೇಯೋದು ಬೇಡೆ ಎಂದರು. ನಾನೂ ಒಬ್ಬ ಪ್ರತಿಪಕ್ಷದಲ್ಲಿರುವ ಶಾಸಕನಾಗಿರುವದರಿಂದ ನನಗೆ ಅಭಿವೃದ್ಧಿ ಪಡಿಸಲು ಯಾವದೇ ಹಣ ಬರುತ್ತಿಲ್ಲ. ಆದರು ಸರ್ಕಾರದ ಮೇಲೆ ಒತ್ತಡ ತಂದು ಮತಕ್ಷೇತ್ರದ ಅಭಿವೃದ್ಧಿಗೆ ಬೇಕಾಗುವ ಎಲ್ಲ ಸವಲತ್ತುಗಳನ್ನು ತರುತ್ತಿದ್ದೇನೆ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಮಾಡಿ ಕೊಟ್ಟಿದ್ದೀರಿ ಅದಕ್ಕಾಗಿ ನಿಮ್ಮ ಸೇವೆ ಮಾಡುವದೇ ನನ್ನ ಆದ್ಯಕರ್ತವ್ಯ ಎಂದರು. ಪ್ರಾಸ್ತಾವಿಕವಾಗಿ ಮಡುಸಹುಕಾರ,ಕಾಶಿಮ ನಾಯ್ಕೋಡಿ,ಶಿವಣ್ಣ ಬಾಗೇವಾಡಿ,ಗುರುನಗೌಡ ಪಾಟೀಲ,ಅನೀಲ್‍ಗೌಡ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಕುದರಿಸಾಲವಾಡಗಿಯ ಪಿ,ಕೆ,ಪಿ,ಎಸ್ ಅಧ್ಯಕ್ಷ ಸಚಿನಗೌಡ ಪಾಟೀಲ, ಗುರುನಗೌಡ ಪಾಟೀಲ, ಅನೀಲಗೌಡ ಪಾಟೀಲ, ಮಡುಸಹುಕಾರ, ಮಹ್ಮದಸಾಬ ಬಿಳವಾರ, ಕಾಶಿಮಸಾಬ ನಾಯ್ಕೋಡಿ, ಶಿವಣ್ಣ ಬಾಗೇವಾಡಿ, ಶಾದಿಮಹಲ್ ಭೂದಾನಿ ದುರ್ಗಪ್ಪ ವಡ್ಡರ, ಇಮಾಮಸಾಬ ಗೊಟಗುಣಕಿ,ಮುತ್ತಪ್ಪ ಇಂಗಳಗಿ,ಸಂಗನಗೌಡ ಪಾಟೀಲ, ಶೀವಶರಣ ಮದ್ದರಕಿ , ಎಂ,ಡಿ,ಮುಲ್ಲಾ, ರಫೀಕ ಬಾವುರ, ದಾವಲಸಾಬ ಇಂಗಳಗಿ, ಶಂಕರಗೌಡ ಪಾಟೀಲ, ಎಂ,ಬಿ,ಸಜ್ಜನ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಮಕ್ಬುಲ್ ಅಲ್ದಾಳ, ಬಂದೇನವಾಜ ಕತ್ನಳ್ಳಿ, ಬುಡ್ಡೇಸಾಬ ಬೋರಗಿ,ಮಲ್ಲಪ್ಪ ಕನ್ನೂರ ಸೇರಿದಂತೆ ಗ್ರಾಮಸ್ತರು ಪಕ್ಷದ ಮುಖಂಡರು ಇದ್ದರು.