ಸಿದ್ದರಾಮಯ್ಯ ಬರುತ್ತಿದ್ದಂತೆ ಕೈಕೊಟ್ಟ ಮಳೆರಾಯ!-ವ್ಯಂಗ್ಯ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.05:- ಸಿದ್ದರಾಮಯ್ಯ ಬರುತ್ತಿದ್ದಂತೆ ಮಳೆರಾಯ ಕೈಕೊಟ್ಟು ಭೀಕರ ಬರಗಾಲ ಆವರಿಸಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ನಡಹಳ್ಳಿ ಎ.ಎಸ್.ಪಾಟೀಲ್ ವ್ಯಂಗ್ಯ ಮಾಡಿದರು.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಬರ ಆವರಿಸಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು ರೈತ ವಿರೋಧಿ ನಿಲುವು ತಳೆದಿದೆ, ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರನ್ನು ಹರಿಸಿ ರಾಜ್ಯದ ರೈತರಿಗೆ ಅನ್ಯಾಯ ಎಸಗಿದೆ ಎಂದು ಕಿಡಿಕಾರಿದರು.
ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವ ಮೂಲಕ ಕುಡಿಯುವ ನೀರಿಗೂ ಹಾಹಾಕಾರ ಪಡಬೇಕಾಗಿದೆ, ಇμÁ್ಟದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆರೆಗಳನ್ನು ತುಂಬಿಸುವುದು, ರೈತರಿಗೆ ಮೇವಿನ ಬೀಜ ನೀಡುವುದು, ರೈತ ಸಭೆ ನಡೆಸುವ ಕೆಲಸ ಮಾಡುತ್ತಿಲ್ಲಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷಎನ್. ಮಹೇಶ್, ರಾಜ್ಯರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ಜಿಲ್ಲಾಉಸ್ತುವಾರಿ ಎಂ. ರುದ್ರೇಶ್, ಜಿಲ್ಲಾಧ್ಯಕ್ಷಸಿ.ಎಸ್. ನಿರಂಜನ್‍ಕುಮಾರ್ ಉಪಸ್ಥಿತರಿದ್ದರು.