ಸಿಯುಕೆಯಲ್ಲಿ ʼನನ್ನ ಮೊದಲ ಮತ ದೇಶಕ್ಕಾಗಿʼ ಅಭಿಯಾನದ ಉದ್ಘಾಟನೆ
ಕಲಬುರಗಿ:ಮಾ.04:”ಭಾರತವನ್ನು ಇಂದಿಗಿಂತಲು ಹೆಚ್ಚು ಸದೃಡಗೊಳಿಸಿ” ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಧಾರವಾಡ ಮಾಜಿ ಕುಲಪತಿ ಪೆÇ್ರ. ಜೆ ಎಸ್ ಪಾಟೀಲ್ ಹೇಳಿದರು. ಇಂದು ಸಿಯುಕೆಯ ಎನ್‍ಎಸ್‍ಎಸ್ ಘಟಕ ಆಯೋಜಿಸಿದ್ದ ʼನನ್ನ ಮೊದಲ ಮತ ದೇಶಕ್ಕಾಗಿʼ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ “ಭಾರತ ಪ್ರಜಾಪ್ರಭುತ್ವದ ತವರು ಮತ್ತು ಇದು ವಿಶ್ವದಲ್ಲಿಯೇ ಹೆಚ್ಚು ಯಶಸ್ವಿ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ಭಾರತ ಸ್ವಾತಂತ್ರ್ಯ ಪಡೆದಾಗ ಇದರ ಪ್ರಜಾಪ್ರಭುತ್ವವು ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ನಾವು ನಮ್ಮನ್ನು ಆಳಲು ಅಸಮರ್ಥರು ಎಂದು ಅನೇಕ ವಿಶ್ವ ನಾಯಕರು ಭಾವಿಸಿದ್ದರು. ಆದರೆ ನಾವು ಅವರ ನಂಬಿಕೆಯನ್ನು ಹುಸಿಗೋಳಿಸಿದ್ದೇವೆ. ಇಂದು ನಾವು ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ ಮತ್ತು 21 ನೇ ಶತಮಾನವು ಭಾರತಕ್ಕೆ ಸೇರಿದೆ, ಏಕೆಂದರೆ ನಾವು ವಿಶ್ವದ ಸದೃಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದೇವೆ. ಭಾರತೀಯ ಚುನಾವಣಾ ಆಯೋಗವು ಮೊದಲಬಾರಿಗೆ ಮತದಾನ ಮಾಡಲಿರುವ ಯುವಕರಿಗೆ ಮತದಾನದ ಮಹತ್ವವನ್ನು ತಿಳಿಸಲು ʼನನ್ನ ಮೊದಲ ಮತ ದೇಶಕ್ಕಾಗಿʼ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಆದ್ದರಿಂದ ನೀವೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ್ತು ರಾಷ್ಟ್ರಕ್ಕಾಗಿ ಮತ ಚಲಾಯಿಸಿ. ಏಕೆಂದರೆ ಪ್ರಜಾಪ್ರಭುತ್ವದ ಯಶಸ್ಸು ಅದರ ನಾಗರಿಕರು ಹೇಗೆ ಮತ ಚಲಾಯಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ರಾಷ್ಟ್ರವನ್ನು ಜಗತ್ತಿನಲ್ಲಿಯೇ ಅತಿ ಪ್ರಮುಖ ದೇಶ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೋವಿಡ್ ಸಂದರ್ಭದಲ್ಲಿ 100 ದೇಶಗಳಿಗೆ ಲಸಿಕೆ ನೀಡಿ ಲಕ್ಷಾಂತರ ಜೀವಗಳನ್ನು ಉಳಿಸುವ ಮೂಲಕ ನಾವು ಜಗತ್ತಿನಲ್ಲಿ ಅತಿ ಪ್ರಮುಖ ರಾಷ್ಟ್ರ ಎಂಬುದನ್ನು ಸಾಬೀತುಪಡಿಸಿದ್ದೇವೆ. ನಾವು ವಸುದೈವ ಕುಟುಂಬಕಂ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟಿದ್ದೇವೆ” ಎಂದು ಅವರು ಹೇಳಿದರು.
ಸನ್ಮಾನ್ಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ, ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ನೀವು ಮಾತ್ರ ಅದನ್ನು ಬದಲಾಯಿಸಲು ಸಾಧ್ಯ. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಬಹಳ ಮುಖ್ಯ. ಇಂದು ಅನೇಕ ದೇಶಗಳು ಸರ್ವಾಧಿಕಾರ ಅಥವಾ ರಾಜಪ್ರಭುತ್ವದಿಂದ ಬಳಲುತ್ತಿವೆ. ನಮ್ಮ ಸದೃಡ ಪ್ರಜಾಪ್ರಭುತ್ವದಿಂದಾಗಿ ನಾವು ಎಲ್ಲಾ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಗಿದೆ. ಆದ್ದರಿಂದ ನೀವೆಲ್ಲರೂ ಯಾವುದೇ ಭಯ ಅಥವಾ ಆಮೀಷಕ್ಕೆ ಅಥವಾ ಯಾವುದೇ ತಾರತಮ್ಯವಿಲ್ಲದೆ ಬಲವಾದ ರಾಷ್ಟ್ರವನ್ನು ನಿರ್ಮಿಸಲು ಮತ ಚಲಾಯಿಸಿ. ಜನರು ರಾಜಕೀಯವನ್ನು ಹಣ ಮಾಡುವುದಕ್ಕಾಗಿ ಬಳಸಿಕೊಳ್ಳಲು ನಾವು ಬಿಡಬಾರದು. ಯಾವುದೇ ಪ್ರಚೋದನೆ ಅಥವಾ ವೈಯಕ್ತಿಕ ಹಿತ ನಿರೀಕ್ಷಿಸದೆ ಮತ ಚಲಾಯಿಸಿ. ನನ್ನ ಜೀವನದಲ್ಲಿ ನಾನು ಎಂದಿಗೂ ಮತದಾನವನ್ನು ತಪ್ಪಿಸಿಲ್ಲ, ದಯವಿಟ್ಟು ತಪ್ಪದೆ ಮತದಾನ ಮಾಡಿ” ಎಂದು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರೇದಾರ ಅವರು ಮಾತನಾಡಿ, “ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸೇವೆ ಬೇಕಾದರೆ ನಾವು ಸೂಕ್ತ ವ್ಯಕ್ತಿಗಳಿಗೆ ಮತ ಹಾಕಬೇಕು. ದೇಶದ ಭವಿಷ್ಯ ಮತದಾರರ ಕೈಯಲ್ಲಿದೆ. ನಿಮ್ಮಂತ ಸುಮಾರು 2.63 ಕೋಟಿ ಹೊಸ ಯುವ ಮತದಾರರು ಮೊದಲ ಬಾರಿಗೆ ಮತದಾರರಾಗಿದ್ದಾರೆ. ದಯವಿಟ್ಟು ರಾಷ್ಟ್ರಕ್ಕಾಗಿ ಮತದಾನ ಮಾಡಿ” ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಮಾನ್ಯ ಕುಲಪತಿಗಳು ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿ ಭೋಧಿಸಿದರು.
ಎನ್‍ಎಸ್‍ಎಸ್ ಸಂಯೋಜಕ ಡಾ.ಶಿವಂ ಮಿಶ್ರಾ ಸ್ವಾಗತಿಸಿ, “ಮೊದಲ ಬಾರಿಗೆ ಮತದಾನ ಮಾಡಲಿರುವ ಯುವಕರಿಗೆ ತಿಳುವಳಿಕೆ ನೀಡಲು ಚುನಾವಣಾ ಆಯೋಗ ಮತ್ತು ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಒಂದು ವಾರ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ” ಎಂದು ಹೇಳಿರದು. ಕೆ ಎಂ ಶರ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು, ಡಾ. ಡಿ ಗೌತಮ್ ವಂದಿಸಿದರು, ಡಾ. ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಪೆÇ್ರ.ಎಂ.ಎಸ್.ಪಾಸೋಡಿ, ಪೆÇ್ರ.ಬಸವರಾಜ ಡೋಣೂರ, ಡಾ.ಬಸವರಾಜ ಕುಬಕಡ್ಡಿ, ಡಾ.ಜೊಹೇರ್ ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.