ಮಾ.೩ ಪೋಲಿಯೋ ಭಾನುವಾರ ಘೋಷಣೆ
ವಿಜಯಪುರ.ಮಾ.೫:ರಾಜ್ಯಾದ್ಯಂತ ಮಾರ್ಚ್ ೩ ರಿಂದ ೬ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ ೩ ಪೋಲಿಯೋ ಭಾನುವಾರವಾಗಿ ಸರಕಾರ ಘೋಷಣೆ ಮಾಡಿದೆ ಎಂದು ಕೋರಮಂಗಲ ಗ್ರಾಮ ಪಂಚಾಯಿತಿ ಸದಸ್ಯರಾದ ದಂಡಿಗಾನಹಳ್ಳಿ ದೇವರಾಜ್ ಹೇಳಿದರು.
ವಿಜಯಪುರ ಹೋಬಳಿಯ ದಂಡಿಗಾನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ದೇಶದಲ್ಲಿ ಪೋಲಿಯೋಹನಿ ನೀಡಲು ಪ್ರಾರಂಭವಾಗಿ ಹತ್ತಾರು ವರ್ಷಗಳು ಕಳೆದಿದ್ದು ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಾಣದಿದ್ದರೂ ಮುಂದಿನ ದಿನಗಳಲ್ಲಿ ಪೋಲಿಯೋ ಬರಬಾರದೆನ್ನುವ ಕಾರಣಕ್ಕಾಗಿ ಪೋಲಿಯೋ ಹನಿಗಳನ್ನು ಐದು ವರ್ಷದ ಒಳಗಿನ ಮಕ್ಕಳಿಗೆ ಕೊಡಿಸಬೇಕೆಂದು ೫ ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಂತೆ ಅಧಿಕಾರಿಗಳು ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಮೇರಿ, ಆಶಾ ಕಾರ್ಯಕರ್ತೆ ಸವಿತಾ, ಆರೋಗ್ಯ ಇಲಾಖೆಯ ಮಮತಾ ಮತ್ತಿತರರು ಭಾಗವಹಿಸಿದ್ದರು.