ಕಡವೆ ಕೊಂದು ಮಾಂಸ ಸಾಗಿಸುತ್ತಿದ್ದ ವಾಹನ ಜಪ್ತಿ: ಆರೋಪಿಗಳ ಬಂಧನ
ಸಂಜೆವಾಣಿ ವಾರ್ತೆ
ಹನೂರು ಮಾ 5 :- ಕಡವೆಯನ್ನು ಅಕ್ರಮವಾಗಿ ಬೇಟೆ ಮಾಡಿದ್ದಲ್ಲದೆ ಅದನ್ನು ತುಂಡು ತುಂಡಾಗಿ ಕತ್ತರಿಸಿ ಸಾಗಾಣಿಕೆ ಮಾಡುವ ವೇಳೆ ಅರಣ್ಯ ಸಿಬ್ಬಂದಿಗಳಿಗೆ ಸಿಕ್ಕಿ ಬಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಹನೂರು ತಾಲ್ಲೂಕಿನ ವಡಕೆ ಹಳ್ಳದ ಸಮೀಪ ನಡೆದಿದೆ.
ಈ ಸಂಬಂಧ ಸೋಮವಾರ ಬೆಳ್ಳಿಗ್ಗೆ 10ಘಂಟೆಯ ವೇಳೆ ಬೆಳಕಿಗೆ ಬಂದಿದೆ ಅರಣ್ಯ ಸಿಬ್ಬಂದಿಗಳು ಗಸ್ತಿನಲ್ಲಿರುವಾಗ ಕೋಣನಕೆರೆ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಅನುಮಾನಸ್ಪದವಾಗಿ ಬಂದವರನ್ನು ವಿಚಾರಿಸಿದಾಗ ಕಡವೆ ಬೇಟೆ ಮಾಡಿ ಮಾಂಸ ಸಾಗಾಣಿಕೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬಸಪ್ಪನದೊಡ್ಡಿ ಗ್ರಾಮದ ಇರ್ಫಾನ್ ಬೇಗ್, ವಹೀದ್, ಅಂಬಿಕಾಪುರದ ಕುಮಾರಸ್ವಾಮಿ, ಅಪ್ಪು, ಕಾಂಚಳ್ಳಿ ಗ್ರಾಮದ ಯಶ್ವಂತ್, ಕುರುಬರದೊಡ್ಡಿ ಗ್ರಾಮದ ಸೈಯದ್ ಆರೀಸ್ ರವರುಗಳನ್ನು ಎ.ಸಿ.ಎಫ್ ಚಂದ್ರಸೇಖರ್ ಪಾಟೀಲ್ ಹಾಗೂ ರಾಮಾಪುರ ವಲಯ ಅರಣ್ಯಾಧಿಕಾರಿ ಕಾಂತರಾಜ್ ಎಸ್ ಚವ್ಹಾಣ್ ನೇತೃತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು , ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಚರಣೆಯಲ್ಲಿ ಅರಣ್ಯಾಧಿಕಾರಿ ರಾಮು,ರಕ್ಷಿತ್,ಕಲ್ಮೇಶ್ ವಿರೇಶ್,ಅಭಿಷೇಕ್ ಉಪಸ್ಥಿತಿರಿದ್ದರುಅಕ್ರಮವಾಗಿ ಕಡವೆ ಮಾಂಸ ಸಾಗಾಣಿಕೆ ಮಾಡುತ್ತಿದ್ದ ಕೆ ಎ – 10 ಎ 7334 ವಾಹನವನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ.
ಬಂಧಿತರಿಂದ ಬೇಟೆಗೆ ಬಳಸಿದ ಹಾಗೂ ಕಡವೆ ಕಡಿದ ಸಲಕರಣೆ ಮತ್ತು ಮೊಬೈಲ್ ಪೆÇೀನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.