ನಮೋ ಸಂಕಲ್ಪ ಯಾತ್ರೆ ಆರಂಭ
ಚಿಕ್ಕಬಳ್ಳಾಪುರ.ಮಾ೫:ರಾಷ್ಟ್ರದಲ್ಲಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಮೋ ಸಂಕಲ್ಪ ಯಾತ್ರೆ ಆರಂಭಿಸಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿಯೂ ಸಹ ಭಾರತೀಯ ಜನತಾ ಪಕ್ಷದಿಂದ ಯಾರೇ ಅಭ್ಯರ್ಥಿಯಾದರು ಸಹ ಅವರ ಗೆಲುವಿಗೆ ಅಹರ್ಣೆಶ ಶ್ರಮಿಸುವುದಾಗಿ ಯೆಲಹಂಕ ಶಾಸಕ ವಿಶ್ವನಾಥ್ ತಿಳಿಸಿದರು.
ಅವರು ಚಿಕ್ಕಬಳ್ಳಾಪುರದಲ್ಲಿ ನಮೋ ಸಂಕಲ್ಪ ಯಾತ್ರೆ ಅಂಗವಾಗಿ ನೂರಾರು ಕಾರುಗಳ ರೋಡ್ ಶೋ ನಡೆಸಿ ಮಾತನಾಡಿದರು. ಈ ಬೃಹತ್ ನಮೋ ಸಂಕಲ್ಪ ಯಾತ್ರೆ, ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದಾಗ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಜೆಸಿಬಿ ಗಳ ಮೂಲಕ ಎರಡು ಬೃಹತ್ ಸೆಬಿನ ಹಾರಗಳನ್ನು ಅತಿಥಿಗಳಿಗೆ ಹಾಕುವ ಮೂಲಕ ಬಿಜೆಪಿ ಕಾರ್ಯಕರ್ತರುಗಳು ಸಂಭ್ರಮಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಯುವಕರಿಗೆ ಟಿಕೆಟ್ ಕೊಡುವ ಬಾರಿ ನಿರೀಕ್ಷೆ ಇದೆ ಇದು ಗೆಲ್ಲಲು ತುಂಬಾ ಅವಕಾಶ ಆಗುತ್ತದೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಿಜೆಪಿ ಕಾರ್ಯಕರ್ತರು ೪೦ ದಿನಗಳ ಕಾಲ ಹಗಲಿರುಳು ಪಕ್ಷಕ್ಕಾಗಿ ದುಡಿಯಬೇಕು ಎಂದು ಎಂದು ಕರೆ ನೀಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಕಟ್ಟಾ ಸುಬ್ರಮಣ್ಯ ನಾಯ್ಡು ಮಾತನಾಡಿ ರಾಷ್ಟ್ರದಲ್ಲಿ ಇಂದು ನರೇಂದ್ರ ಮೋದಿ ರವರ ನಾಯಕತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕಾಗಿದೆ ದೇಶದಲ್ಲಿ ಸರ್ವತಮ್ಮುಖ ಅಭಿವೃದ್ಧಿ ಸಾಧಿಸಲು ಹಾಗೂ ಭದ್ರತಾ ದೃಷ್ಟಿಯಿಂದ ಬಿಜೆಪಿಗೆ ಜನತೆ ವೋಟು ಮಾಡಬೇಕೆಂದು ಕರೆ ನೀಡಿದರು.
ಈಗಾಗಲೇ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಸಂಭವನೀಯ ಅಭ್ಯರ್ಥಿಯೆಂದು ಬಿಂಬಿಸಿಕೊಂಡಿರುವ ಯಲಂಕ ಶಾಸಕ ವಿಶ್ವನಾಥ್ ರವರ ಪುತ್ರ ಅಲೋಕ್ ವಿಶ್ವನಾಥ್ ರವರು ಸಹ ಸಭೆಯಲ್ಲಿ ಇದ್ದು ಕಾರ್ಯಕ್ರಮದಲ್ಲಿ ನೆಲೆಸಿದ್ದ ಅಪಾರ ಬಿಜೆಪಿ ಕಾರ್ಯ ಕರ್ತರಿಗೆ ನಮಸ್ಕರಿಸಿ ಮುಂದೆ ಸಾಗುತ್ತಿದ್ದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ರಾಮಲಿಂಗಪ್ಪ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಒಳಗೊಂಡಂತೆ ಮತ್ತಿತರರು ಹಾಜರಿದ್ದರು.
ಒಂದು ವೇಳೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಲಹಂಕ ಕ್ಷೇತ್ರದ ಶಾಸಕ ಅವರ ಪುತ್ರ ಅಲೋಕ್ ವಿಶ್ವನಾಥ್ ಅವರೇ, ಅಭ್ಯರ್ಥಿ ಆದರೆ ಅವರ ಗೆಲುವು ಖಚಿತ ಎಂಬ ಮಾತು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ರವರಿಂದಲೂ ಕೇಳಿಬಂದಿತ್ತು.