ಕಾಡಿಗೆ ಬೆಂಕಿ 50ಕ್ಕೂ ಹೆಚ್ಚು ಎಕರೆ ಸುಟ್ಟು ಭಸ್ಮ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.05- ಬಿ.ಆರ್ ಟಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಬೆಂಕಿ ಕಾಣಿಸಿಕೊಂಡು 50 ಕ್ಕೂ ಹೆಚ್ಚು ಎಕರೆ ಪ್ರದೇಶ ಸುಟ್ಟು ಕರಕಲಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣ ಜನೂರು ವಲಯದಲ್ಲಿ ನಡೆದಿದೆ.
ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ 3 ಕಡೆ ಬೆಂಕಿ ಬಿದ್ದಿದ್ದು ಎರಡು ಕಡೆ ಬೆಂಕಿ ಹತೋಟಿಗೆ ಬಂದಿದ್ದು ಒಂದು ಕಡೆ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಈ ಕುರಿತು ಬಿಆರ್ ಟಿ ಡಿಸಿಎಫ್ ದೀಪ್‍ಜೆ ಕಂಟ್ರಾಕ್ಟರ್ ಮಾತನಾಡಿ, ಪುಣಜನೂರು ವಲಯದ ಮೂರು ಕಡೆ ಬೆಂಕಿ ಬಿದ್ದಿತ್ತು. 2 ಕಡೆ ಬೆಂಕಿ ನಂದಿಸಲಾಗಿದ್ದು 1 ಕಡೆ ಬೆಂಕಿ ನಂದಿಸಲಾಗುತ್ತಿದೆ. ಗ್ರೌಂಡ್ ಫೈರ್ ಆಗಿದ್ದು 40-50 ಎಕರೆ ಪ್ರದೇಶದಲ್ಲಿ ಬೆಂಕಿ ಬಿದ್ದಿದೆ ಎಂದು ತಿಳಿಸಿದ್ದಾರೆ.