ಸೂಲಿಬೆಲೆ ಆರೋಪ ಹಾಸ್ಯಾಸ್ಪದ ; ಲಚ್ಚಪ್ಪ ಜಮಾದಾರ
ಕಲಬುರಗಿ,ಮಾ.4-ಸೂಲಿಬೆಲೆ ಅಂಥ ನೂರು ಜನ ಸುಳ್ಳು ಭಾಷಣಕಾರರು ಬಂದು ಏನೇ ಆರೋಪ ಮಾಡಿದರು ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ, ಐಟಿ.ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ
ಪ್ರಿಯಾಂಕ್ ಖರ್ಗೆ ಅವರು ಹೆದರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಲಚ್ಚಪ್ಪ ಜಮಾದಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಚಿತ್ತಾಪುರಕ್ಕೆ ಬಂದು ಚಕ್ರವರ್ತಿ ಸೂಲಿಬೆಲೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಗಳು ಮಾಡಿರುವುದು ಹಾಸ್ಯಾಸ್ಪದವಾಗಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಓಲೈಸಲು ವಿನಾಃಕಾರಣ ಆರೋಪಿಸಿದ್ದಾರೆ ಹೊರತು ಅವರ ಭಾಷಣದಲ್ಲಿ ಹುರುಳಿಲ್ಲ. ಬಾಡಿಗೆ ಭಾಷಣಕಾರ ಸೂಲಿಬೆಲೆ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಮೂಲಕ ರಾಜ್ಯ ಮತ್ತು ದೇಶದ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಯುವಕರನ್ನು ದಾರಿ ತಪ್ಪಿಸಿ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುತ್ತಿರುವ ಅವರನ್ನು ಮುಂದಿನ ದಿನಗಳಲ್ಲಿ ಜನರೇ ಬುದ್ದಿ ಕಲಿಸುತ್ತಾರೆ ಎಂದು ಜಮಾದಾರ ಹೇಳಿದರು.
ಕಲಬುರಗಿಗೆ ಸೂಲಿಬೆಲೆ ಆಗಮಿಸಿದಾಗ ಘೇರಾಮ್ ಹಾಕುವ ಮೂಲಕ ಎಚ್ಚರಿಕೆ ನೀಡುತ್ತೇವೆ. ಸಹಾಯಕ ಆಯುಕ್ತರ ಮೂಲಕ ಪೆÇಲೀಸರಿಂದ ಕಲಬುರಗಿ ಜಿಲ್ಲೆಗೆ ಪ್ರವೇಶ ಮಾಡದಂತೆ ಸಚಿವರು ನಿಬರ್ಂಧಿಸಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರ, ಪೆÇಲೀಸ್‍ನವರಿಗೆ ಯಾವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎನ್ನುವದರ ಬಗ್ಗೆ ಗೊತ್ತಿದೆ. ಪೆÇಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಹೊರತು ಉಸ್ತುವಾರಿ ಸಚಿವರ ಕೈಗೊಂಬೆಯಾಗಿ ಕೆಲಸ ಮಾಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೆÇೀಲಿಸ್ ಇಲಾಖೆ ಕರ್ತವ್ಯಾಗಿದೆ ಎಂದು ಸೂಲಿಬೆಲೆ ಆರೋಪಕ್ಕೆ ಲಚ್ಚಪ್ಪ ಜಮಾದಾರ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಮಲಿಂಗ ನಾಟೀಕಾರ, ಶರಣು, ಅಂಬಾರಾಯ ಜವಳಗಾ, ಶಿವು ಧಣಿ, ಮಲ್ಲು ಗುಡುಬಾ, ಭೀಮಶ್ಯಾ ಖನ್ನಾ ಉಪಸ್ಥಿತರಿದ್ದರು.