ಮುದ್ದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊದಲ ಕಿಡ್ನಿ ಕಸಿ ಯಶಸ್ವಿ
ಕಲಬುರಗಿ,ಮಾ.4:ನಗರದ ಎಂಜಿ ರಸ್ತೆಯಲ್ಲಿರುವ ಮುದ್ದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊದಲ ಕಿಡ್ನಿ ಕಸಿ ಯಶಸ್ವಿಯಾಗಿದೆ.
ಮುದ್ದಾ ಆಸ್ಪತ್ರೆಯ ತಂಡವು ಬೆಂಗಳೂರಿನ ಫೆÇೀರ್ಟಿಸ್ ಆಸ್ಪತ್ರೆಯ ಸಹಯೋಗದೊಂದಿಗೆ ಮುದ್ದಾ ಆಸ್ಪತ್ರೆಯಲ್ಲಿ ಮೊದಲ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ.
ಯಾದಗಿರಿಯ ರೋಗಿಯೊಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, 6 ತಿಂಗಳಿಂದ ಡಯಾಲಿಸಿಸ್ ಮಾಡುತ್ತಿದ್ದರು. ಕಿಡ್ನಿ ಕಸಿ ಮಾಡಿಸಿಕೊಳ್ಳಲು ಮುದ್ದಾ ಆಸ್ಪತ್ರೆಗೆ ದಾನಿಯಾಗಿ ಅಕ್ಕನೊಂದಿಗೆ ಬಂದಿದ್ದ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅವರ ಕ್ರಿಯೇಟಿನೈನ್ 11 ಎಂಜಿ/ ಡಿಎಲ್ ನಿಂದ ಸಾಮಾನ್ಯ ಸ್ಥಿತಿಗೆ ಬಂದಿತು. ಈಗ ಕಿಡ್ನಿ ಸ್ವೀಕರಿಸುವವರು ಮತ್ತು ಕಿಡ್ನಿ ದಾನಿ ಇಬ್ಬರೂ ಸ್ಥಿರವಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ.
ಡಾ ಹರ್ಷ,ಡಾ ರಮೇಶ್,ಡಾ ಶರಣು ರುದ್ರವಾಡಿ,ಡಾ ರಾಜ್ ಅಹಮದ್ ಮುಲ್ಲಾ,ಡಾ ಅಜೀಮುದ್ದೀನ್,ಡಾ ಶರಣಬಸ್ಸು ಡಿಗ್ಗಿ,ಡಾ ಅನಿಲ್ ಮುದ್ದಾ,ಡಾ ಅಶೋಕ್,ಡಾ ಎಸ್ ಆರ್ ಪಾಟೀಲ್,ಡಾ ಮೊಹ್ಸಿನ್ ಮತ್ತು ಕೃಷ್ಣಾಜಿ,ಗುರು,ಪರಶುರಾಮ,ರಮೇಶ್,ಶಿವರಾಜ್,ಮತೀನ್,ಕೌಶಲ್ಯಾ,ಪ್ರಿಯಾಂಕಾ, ಕಾರ್ತಿಕ್ ಅವರ ತಂಡವು ಕಿಡ್ನಿಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ.