ಯಡ್ರಾಮಿ ಅಂಗವಿಕಲರು ಪಿಂಚಣಿ ಹಣಕ್ಕಾಗಿ ಪರದಾಟ
ಮಡಿವಾಳಪ್ಪ ಟಿ ಯತ್ನಾಳ
ಯಡ್ರಾಮಿ:ಮಾ.4:ಅಂಗವಿಕಲರು ಪಿಂಚಣಿ ಹಣಕ್ಕಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಅಂಗವಿಕಲದಾರರು ಹಾಗೂ ವೃದ್ಧರು ಹಲವಾರು ತಿಂಗಳಿಂದ ಪಿಂಚಣಿ ಬರದೇ ಯಡ್ರಾಮಿ ತಹಸೀಲ್ದಾರ ಕಚೇರಿ ಅಲೆದಾಡುತ್ತ ಆಡಳಿತದ ವಿರುದ್ಧ ಶಾಪ ಹಾಕುವ ಘಟನೆ ನಡೆದಿದೆ.
ತಾಲೂಕಿನ ತೆಲಗಬಾಳ ಗ್ರಾಮದ ಅಂಗವಿಕಲರು ಮುಂಜಾನೆ ಗ್ರಾಮದ ಸಂಪೂರ್ಣ ಅಂಗವಿಕಲರು ತಹಸೀಲ್ದಾರ ಕಚೇರಿಯ ಮುಂದೆ ತಮ್ಮ ವೇತನ ಬರುತ್ತಿಲ್ಲ ಎಂದು ಅಳುವ ಅಮಾನವೀಯ ಘಟನೆ ನಡೆದರು ನಮಗೆ ಸಂಭಂದ ವಿಲ್ಲದ ರೀತಿಯಲ್ಲಿ ಸಿಬ್ಬಂದಿವರ್ಗ ವರ್ತನೆ ಮಾಡಿದ್ದಾರೆ.
ನಾವುಗಳು ಅಂಗವಿಕಲರು ಹಣ ಬರುತ್ತಿಲ್ಲ ಎಂದು ಕೇಳಿದರು ಬ್ಯಾಂಕಗಳಿಗೆ ಹೊಗಬೇಕು ಆಧಾರ್ ಕಾರ್ಡ ಹತ್ತಿರ ಹೊಗಬೇಕು ಎಂದು ಹೇಳುತ್ತಾರೆ.
ಅಂಗವಿಕಲರು ನಾವುಗಳು ಎಲ್ಲಿಗೆ ಹೋಗಬೇಕು ಹೇಳಿ ಸರ್ಕಾರ ನೀಡುವ ಪಿಂಚಣಿ ಹಣದಿಂದ ಆಹಾರ ಸೇವಿಸುವ ನಾವುಗಳು ಈ ರೀತಿಯಲ್ಲಿ ಅಧಿಕಾರಿಗಳು ನಮಗೆ ಮಾನವೀಯತೆ ಇಲ್ಲದೆ ಮಾತಾಡುತ್ತಾರೆ ಎಂದು ಆರೋಪಿಸಿದರು.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ಪಿಂಚಣಿ ವೇತನ ಹಣ ಪ್ರಾರಂಭ ಮಾಡಿ ಅಂಗವಿಕಲರ ಬಾಳಿಗೆ ಬೆಳಕಾಗಬೇಕು ಎಂದು ಮನವಿ ಮಾಡಿದರು.
ಈ ರೀತಿಯಲ್ಲಿ ತಹಸೀಲ್ದಾರ ಕಚೇರಿಯವರು ತಪ್ಪು ಮಾಹಿತಿ ನೀಡುವ ಅಧಿಕಾರಿಗಳಾದ ಕೇಸ್ ವರ್ಕರ್ ಹಾಗೂ ಗ್ರೇಡ್ 2 ತಹಸೀಲ್ದಾರ ಅವರನ್ನು ಅಂಗವಿಕಲರಿಗೆ ಮಾನವೀಯತೆ ಇಲ್ಲದೆ ರೀತಿಯಲ್ಲಿ ವರ್ತನೆ ಮಾಡುವದು ಅಲ್ಲದೆ ತಪ್ಪು ಮಾಹಿತಿ ನೀಡುತ್ತಿದ್ದು ತಕ್ಷಣ ಜಿಲ್ಲಾಡಳಿತ ಸುಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹೀಗೆ ಮುಂದುವರಿದರೆ ಮುಂದಿನ ದಿನಮಾನದಲ್ಲಿ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಪಿಂಚಣಿ ವಂಚಿತರಾದ ನಾಗಮ್ಮ ತಂದೆ ಮಲ್ಲಣ್ಣ ತೆಲಗಬಾಳ,ರೇಣುಕಾ ನಾಗಪ್ಪ ತೆಲಗಬಾಳ,ಮಾಂತಯ್ಯ ಹಿರೇಮಠ, ಚಿದಾನಂದ ಶಿವಲಿಂಗಪ್ಪ ವಾಲಿ ಇತರರು ಪತ್ರಿಕೆ ಮೂಲಕ ತಿಳಿಸಿದ್ದಾರೆ.
ತಾಲೂಕಿನಲ್ಲಿ ಬೊಗಸ್ ಪಿಂಚಣಿ ಆಗಿರುವುದರಿಂದ ತನಿಖೆ ವೇಳೆಯಲ್ಲಿ ಈ ಸಮಸ್ಯೆಗಳು ಆಗಿದ್ದು.ನೋಡಿಕೊಂಡು ಮಾಡಲಾಗುವುದು.
ನಮಗೆ ಬರಬೇಕಾದ ಅಂಗವಿಕಲರ ಹಣವು ನಾಲ್ಕು ತಿಂಗಳಿಂದ ಬಂದ್ ಆಗಿದ್ದು.ಪ್ರತಿದಿನ ಕಚೇರಿಗೆ ಬರುತ್ತೆವೆ.ಆಧಾರ್ ಕಾರ್ಡ್ ಸೆಂಟರಿಗೆ ಹೋಗಿ,ಬ್ಯಾಂಕಗಳಿಗೆ ಹೋಗಿ ಎಂದು ಹೇಳುತ್ತಾರೆ ನಾವು ಅಂಗವಿಕಲರು ಎಲ್ಲಿಗೆ ಹೋಗಬೇಕು ಎಂದು ಹೊತ್ತಾಗುತ್ತಿಲ್ಲ.
—ನಾಗಮ್ಮ ತಂದೆ ಮಲ್ಲಣ್ಣ ಅಂಗವಿಕಲ ಮಹಿಳೆ ತೆಲಗಬಾಳ ಗ್ರಾಮದ ನಿವಾಸಿ.