ಜನಪರವಾದ ಕಾರ್ಯ ಮಾಡಿ:ಟಿ.ಎನ್.ಭೀಮು ನಾಯಕ
ಸೈದಾಪುರ:ಮಾ.4:ಪಟ್ಟಣದಲ್ಲಿ ರವಿವಾರದಂದು ನಡೆದ ಸಭೆಯಲ್ಲಿ ವಲಯ ಕರವೇ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಸೈದಾಪುರ ವಲಯ ಅಧ್ಯಕ್ಷರಾಗಿ ಸಾಗರ್ ಹುಲ್ಲೇರ್, ಉಪಾಧ್ಯಕ್ಷರಾಗಿ ಮಲ್ಲು ಬಾಡಿಯಾಳ, ತೈಸಿನ್ ಮುನಗಲ್, ಪ್ರಧಾನ ಕಾರ್ಯದರ್ಶಿಗಳಾಗಿ ಯಲ್ಲಾಲಿಂಗ ಗೂಡುರು, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲು ಭೀಮನಳ್ಳಿ, ಸಹ ಕಾರ್ಯದರ್ಶಿಯಾಗಿ ಹುಸೇನ್ ಅಲಿ, ಮಲ್ಲು ಚೌವಣ್, ಪ್ರಧಾನ ಸಂಚಾಲಕರಾಗಿ ಮಹೇಶ ಜೆಗರ್, ಅನಿಲ್, ಸಂಚಾಲಕರಾಗಿ ಅಂಜು ಬಾಗ್ಲಿ, ರತ್ನಪ್ಪ ರಾಂಪುರ ಅವುರಗಳನ್ನು ನೇಮಕಮಾಡಲಾಗಿದೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ಜನಪರವಾದ ಕಾರ್ಯಗಳನ್ನು ಮಾಡುವ ಮೂಲಕ ಸಂಘಟನೆಯನ್ನು ಬಲಪಡಿಸಿಬೇಕು. ನಾಡು, ನುಡಿ, ಭಾಷೆಗೆ ಅನ್ಯಾಯವಾದಾಗ ಸೇವಾ ಮನೋಭಾವನೆಯೊಂದಿಗೆ ಕೆಲಸ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಿ ಅವರಿಗೆ ಅನುಕೂಲ ಮಾಡಿಕೊಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ವಲಯ ನೂತನ ಕರವೇ ಅಧ್ಯಕ್ಷ ಸಾಗರ ಹುಲ್ಲೇರ್ ಮಾತನಾಡಿ, ಕನ್ನಡಿಗರಿಗೆ ಅನ್ಯಾಯವಾದ ಧ್ವನಿ ಎತ್ತುವುದು. ಹಾಗೂ ನಮ್ಮ ಕಡೇಚೂರು-ಬಾಡಿಯಾಲ ಕೈಗಾರಿಕ ಪ್ರದೇಶದಲ್ಲಿ ನಿರ್ಮಾಣವಾಗುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯುವಂತೆ ಯಾವುದೇ ರಾಜಿ ಇಲ್ಲದೆ ಪ್ರಾಮಣಿಕವಾಗಿ ಜಿಲ್ಲಾಧ್ಯಕ್ಷರ ಮಾರ್ಗದರ್ಶನದ ಮೇರಿಗೆ ಕಾರ್ಯ ನಿರ್ವಹಿಸುತೆನೆ ಎಂದು ಹೇಳಿದರು.
ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಯುವ ಘಟಕ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಶ್ವರಾಜ್ ವನಿಗೇರ, ಗುರಮೀಠಕಲ್ ತಾಲೂಕ ಅಧ್ಯಕ್ಷ ಶರಣು ಎಲ್ಹೇರಿ, ವಡಿಗೇರಿ ತಾಲೂಕ ಅಧ್ಯಕ್ಷÀ ಅಬ್ದುಲ್ ಚಿಗನೂರ್. ತಾಲೂಕ ಪ್ರಧಾನ ಕಾರ್ಯದರ್ಶಿ ಸುರೇಶ ಬೇಳಗುಂದಿ, ಕರವೇ ಕಾರ್ಯಕರ್ತರು ಸೇರಿದಂತೆ ಇತರರಿದ್ದರು.