ನೇಕಾರರ ಪಾಲು ಮತ್ತು ಹಕ್ಕು ನೀಡಲು ಮನವಿ
ಕಲಬುರಗಿ:ಮಾ.4:ಇತ್ತೀಚೆಗೆ, ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ(ಅಪ್ಪು ಗೌಡರ) ಜನ್ಮ ದಿನದಂದು ಬಿಜೆಪಿಯ ನೇಕಾರ ಪ್ರಕೋಷ್ಠ ಮತ್ತು ನೇಕಾರ ಸಮಾಜಗಳ ನಿಯೋಗ ಅವರ ನಿವಾಸದಲ್ಲಿ ಜನ್ಮ ದಿನದ ನಿಮಿತ್ಯ ಅವರನ್ನು ಮಾಜಿ ಶಾಸಕರನ್ನು ಗೌರವಿಸಿ, ಶುಭಾಶಯಗಳು ಕೋರಿ, ತಾವು ವಿರೋಧ ಪಕ್ಷದ ನಾಯಕರಾದ ಆರ್, ಅಶೋಕ ರವರನ್ನು ಪತ್ರ ಬರೆದು, ರೈತ ಮತ್ತು ನೇಕಾರ ಸಮುದಾಯದ ಹಿತದೃಷ್ಟಿಯಿಂದ ಕಳೆದ ವರ್ಷ ಸರಕಾರ ನೇಕಾರ ನಿಗಮ ಸ್ಥಾಪನೆಗೆ ಅಧಿಸೂಚನೆ ಹೊರಡಿಸಿದೆ ಅದನ್ನು ಜಾರಿಗೆ ತರಲು ಆಗ್ರಹಿಸಿ ಎಂದು ಕೋರಲು ವಿನಂತಿಸಲಾಯಿತು ಅದೇ ರೀತಿ ಕೇಂದ್ರ ಸರ್ಕಾರದ ಜವಳಿ ಯೋಜನೆಯ ನೀಲನಕ್ಷೆ ಯನ್ನು ಜಾರಿಗೊಳಿಸಲು ರಾಜ್ಯದ ಪಾಲಿನ ಹಣ ಬಿಡುಗಡೆಗೆ ಧ್ವನಿ ಗುಡಿಸಿ, ಕಲಬುರಗಿ ಜಿಲ್ಲೆಯ ಪಾರಂಪರಿಕ ನೇಕಾರ ಸಮಾಜಗಳಿಗೆ 51% ಪಾಲಿನ ಹಕ್ಕು ಪಡೆಯುವಂತೆ ಮಾಡಲು ಕೊರಲಾಯಿತು, ಮೊದಲಿಗೆ ಮಾಜಿ ದಕ್ಷಿಣ ಮಂಡಲ ಕಾರ್ಯದರ್ಶಿ ಸತೀಶ ಜಮಖಂಡಿ ಸ್ವಾಗತಿಸಿದರು ನಂತರ ಪ್ರಾಸಂಗಿಕವಾಗಿ ನೇಕಾರ ಮಹಾನಗರ ನೇಕಾರ ಪ್ರಕೋಷ್ಠ ಸಂಚಾಲಕರಾದ ಶಿವಲಿಂಗಪ್ಪಾ ಅಷ್ಟಗಿ ನೈತೃತ್ವ ದಲ್ಲಿ ಆಗಮಿಸಿದ ಸಮಾಜದ ಹಿರಿಯರು ಮಾತನಾಡಿ ಜವಳಿ ಪಾರ್ಕ್ ನ ಯೋಜನೆಯ ಅಡಿಯಲ್ಲಿ ನಮ್ಮ ಮಕ್ಕಳಿಗೆ ಉದ್ಯೋಗ ಖಾತರಿ ಪಡಿಸುವಲ್ಲಿ ನೀವು ಸಹಕರಿಸಬೇಕೆಂದು ಕೋರಿದರು. ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಹಾಗೂ ನ್ಯಾಯವಾದಿಗಳಾದ ಜೇನವೆರಿ ವಿನೋದ ಕುಮಾರ ಮಾತನಾಡಿ ನೇಕಾರರನ್ನು ಕಡೆಗಣಿಸಿ ರಾಜ್ಯ ಬಜೆಟ್ ನಲ್ಲಿ ಅನ್ಯಾಯ ಮಾಡಿದ ನಿಲುವಿಗೆ ಇದೆ 23.2.23 ರಂದು ಪ್ರಪ್ರಥಮ ಬಾರಿಗೆ ಬೃಹತ್ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದೇವೆ ಅದನ್ನು ಅರಿತು ತಾವು ಕೂಡಾ ಮುಂದಿನ ತಿಂಗಳು ಜರಗುವ ಲೋಕಸಭಾ ಚುನಾವಣೆಯಲ್ಲಿ ನೇಕಾರ ಒಗ್ಗಟ್ಟಾಗಿ ಮತ ಪಡೆಯಲು ಅಭ್ಯರ್ಥಿ ನೇಕಾರರ ವಿಶ್ವಾಸ ಪಡೆಯಲು ಸಭೆ ಹಮ್ಮಿಕೊಳ್ಳುವ ಮೂಲಕ ನೇಕಾರರಿಗೆ ನ್ಯಾಯ ಒದಗಿಸಲು ಆಗ್ರಹಿಸಿದರು. ನೇಕಾರ ನಿಯೋಗದಲ್ಲಿ ಹಟಗಾರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಚನ್ನಮಲ್ಲಪ್ಪ ನಿಂಬೆಣ್ಣಿ ಕಾರ್ಯದರ್ಶಿಗಳಾದ ಸೂರ್ಯಕಾಂತ ಸೊನ್ನದ, ಕುರಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ ಕರದಳ್ಳಿ, ಉಪಾಧ್ಯಕ್ಷ ಕುಶಾಲ ಯಡವಳ್ಳಿ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್ ಖಜಾಂಚಿ ಮಲ್ಲಿನಾಥ ಕುಂಟೋಜಿ, ತೊಗಟ ವೀರ ಅಧ್ಯಕ್ಷ ಶ್ರೀನಿವಾಸ ಬಲಪೂರ್, ಪದ್ಮಸಾಲಿ ಉಪಾಧ್ಯಕ್ಷ ವಿಜಯಕುಮಾರ ತ್ರೀವೇದಿ, ಉತ್ತರ ಮತ ಕ್ಷೇತ್ರದ ಮಹಾದೇವಪ್ಪ ಘಾಳೆ, ಡ್ರಾ.ಬಸವರಾಜ ಚನ್ನಾ, ಶಾಂತ್ ಕುಮಾರ ಗೌರ ಮತ್ತು ಭೀಮಳ್ಳಿ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.