ರೋಟರಿ ಕ್ಲಬ್ ಗುಲ್ಬರ್ಗ ನಾರ್ತ್ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ವಾಟರ್ ಬಾಟಲ್ ನ ವಿತರಣೆ
ಕಲಬುರಗಿ:ಮಾ.4:ನಿಸ್ವಾರ್ಥ ಸೇವೆಯ ರೋಟರಿ ಉದ್ದೇಶ .ಪಲ್ಸ್ ಪೆÇೀಲಿಯೋ ಹಿಡಿದು ಅನೇಕ ಜನಾನುರಾಗಿ ಜನ ಸೇವೆಗಳ ಮಾಡಿದ್ದು ರೋಟ್ರಿಯ ಸಾಧನೆ. ಬಡ ವಿದ್ಯಾರ್ಥಿಗಳಿಗಾಗಿ ಬ್ಯಾಗ್ ಮತ್ತು ವಾಟರ್ ಬಾಟಲ್ ಗಳನ್ನು ನಮ್ಮ ರೋಟರಿ ಕ್ಲಬ್ ಗುಲ್ಬರ್ಗ ನಾರ್ತ್ ವತಿಯಿಂದ ವಿತರಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಎಂದು ರೋಟರಿ ಜಿಲ್ಲೆ 3160 ಗವರ್ನ ಗವರ್ನರ್ ಆದ ಶ್ರೀ ಮಾಣಿಕ್ ಪವಾರ್ ಅವರು ರೋಟರಿ ಕ್ಲಬ್ ಗುಲ್ಬರ್ಗ ನಾರ್ತ್ ಮತ್ತು ಎಫೆÇೀರೆನ್ಸಿ ಕಂಪನಿಯ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ, ಬ್ರಹ್ಮಪುರ್ ವಿದ್ಯಾರ್ಥಿಗಳಿಗೆ ಬ್ಯಾಗ ಮತ್ತು ವಾಟರ್ ಬಾಟಲ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ನಮ್ಮ ಸರ್ಕಾರಿ ಪ್ರಥಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಮತ್ತು ವಾಟರ್ ಬಾಟಲ್ ಗಳನ್ನು ವಿತರಿಸಿದ ರೋಟರಿ ಕ್ಲಬ್ ಗುಲ್ಬರ್ಗ ನಾರ್ತ್ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಅರ್ಪಿಸಿ ಮುಂದೆ ಕೂಡ ಇದೇ ರೀತಿ ನಮ್ಮ ವಲಯದ ಪ್ರೌಢಶಾಲಾ ಮಕ್ಕಳಿಗೂ ಕೂಡ ಇಂತಹ ಸೌಲಭ್ಯವನ್ನು ಕೊಡಬೇಕೆಂದು ರೋಟರಿ ಕ್ಲಬ್ ನವರಿಗೆ ವಿಜಯಕುಮಾರ್ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಲ್ಬುರ್ಗಿ ದಕ್ಷಿಣ ವಲಯ ವಿನಂತಿಸಿದರು. ಸುಬ್ಬರಾಯಪ್ಪ ಬಿ ಆರ್ ಸಿ ಕಲಬುರ್ಗಿ ದಕ್ಷಿಣ ಸಂಪತ್ತಿ ತಪಾಡಿಯ ಅಭಿಜಿತ್ ಪಡೆ ಶೆಟ್ಟಿ ಡಾ. ಪ್ರಕಾಶ್ ರಾಥೋಡ್ ಕಲಬುರ್ಗಿ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳು . ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಗುಲ್ಬರ್ಗ ಉತ್ತರ ವಲಯದ ಅಧ್ಯಕ್ಷರಾದ ರಾಮ್ ಶಾನ್ ಭೋಗ ವಹಿಸಿದರು. ರೋಟರಿ ಕ್ಲಬ್ ನಾರ್ತನ ಅಧ್ಯಕ್ಷರಾದ ರಾಮ್ ಶಾನ್ಬೋಗ ಕಾರ್ಯಕ್ರಮದ ಕುರಿತು ಮಾತನಾಡಿದರು. ಸರಕಾರಿ ಪ್ರಾಥಮಿಕ ಶಾಲೆಯ ಬ್ರಹ್ಮಪುರ ಮುಖ್ಯೋಪಾಧ್ಯರಾದ ಶ್ರೀ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ಶ್ರೀ ವೀರೇಶ ಬಿಳಗಿ ನಿರೂಪಿಸಿದರು. ಶ್ರೀ ದತ್ತಾತ್ರೇ ಪಾಟೀಲ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ರಾಜು ಲೆಂಗಟಿ ಅಧ್ಯಕ್ಷರು ಸರಕಾರಿ ನೌಕರರ ಸಂಘ ಕಲಬುರ್ಗಿ ಜಿಲ್ಲೆ, ಸುಬ್ಬರಾಯಪ್ಪ, ಡಾ. ಪ್ರಕಾಶ್ ರಾಥೋಡ್ ,ರೋಟರಿ ಗವರ್ನರ್ ಮಾಣಿಕ್ ಪವರ್, ರೋಟರಿ ಕ್ಲಬ್ ಗುಲ್ಬರ್ಗ ಉತ್ತರ ಅಧ್ಯಕ್ಷರಾದ ಶ್ರೀರಾಮ್ ಶಾನ್ ಬೊಗ್ ,ಕಾರ್ಯದರ್ಶಿಯಾದ ನೌಶಾದ ಇರಾನಿ, ಸಂಪತ್ ಕುಮಾರ್ ತಪಾಡಿಯ, ಅಭಿಜಿತ್ ಪಡಶೆಟ್ಟಿ ಡಾ. ಬಾಬು ರಾವ್ ಶೇರಿಕಾರ್ , ಮಲ್ಲು ಉದನೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಮತ್ತು ವಾಟರ್ ಬಾಟಲ್ ಗಳನ್ನು ವಿತರಿಸಲಾಯಿತು.