ಆಂದೋಲ ಗ್ರಾಮದಲ್ಲಿ ಮೋಸಳೆ ಪ್ರತ್ಯಕ್ಷ
ಜೇವರ್ಗಿ:ಮಾ.4:ತಾಲೂಕಿನ ಆಂದೋಲ ಗ್ರಾಮದ ಹೊರವಲಯದ ಬಾವಿಯಲ್ಲಿ ಮೋಸಳೆ ಪ್ರತ್ಯಕ್ಷವಾಗಿ ಭಯಾನಕ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ತಾಲೂಕಿನ ಆಂದೋಲ ಗ್ರಾಮದ ಹೊರವಲಯದ ಬಾವಿಯಲ್ಲಿ ಮೋಸಳೆ ಕಂಡು ಬಂದ ತಕ್ಷಣ ಗ್ರಾಮಸ್ಥರು ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ತಕ್ಷಣ ಎಚ್ಚತ್ತುಕೊಂಡ ಅಧಿಕಾರಿಗಳು.
ಜೇವರ್ಗಿ ಅರಣ್ಯ ಇಲಾಖೆ ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಮೋಸಳೆ ಹಿಡಿದು ಕಲಬುರಗಿ ಅರಣ್ಯ ಇಲಾಖೆ ಒಪ್ಪಿಸಿದ್ದಾರೆ.ಇದರಿಂದ ಗ್ರಾಮದ ಜನರು ನೆಮ್ಮದಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.