ಪತ್ರಕರ್ತ ರಾಮ ಮನಗೂಳಿ ಅವರಿಗೆ ಶ್ರದ್ದಾಂಜಲಿ
ಬಸವನಬಾಗೇವಾಡಿ:ಮಾ.4: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ರಾಮ ಮನಗೂಳಿ ಅವರು ನಿಧನ ಇಡೀ ಪತ್ರಕರ್ತ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತ ರಾಜು ಗಣಾಚಾರಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡ ಇತ್ತಿಚೆಗೆ ನಿಧನ ಹೊಂದಿದ ಪತ್ರಕರ್ತ ರಾಮ ಮನಗೂಳಿ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿರುವ ರಾಮ ಮನಗೂಳಿ ಅವರು ವಿಜಯಪುರ ಜಿಲ್ಲೆಯೊಂದಿಗೆ ನಿಕಟ ಪೂರ್ವ ಸಂಭಂದವನ್ನು ಹೊಂದಿದ್ದರು, ಅಲ್ಲದೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರೊಂದಿಗೆ ನಾವು ಭಾಗವಹಿಸಿದ್ದೆವು, ಅಲ್ಲದೇ ಸಾಕಷ್ಟು ಅನುಭವಿಗಳಾಗಿದ್ದ ರಾಮ ಅವರು ಸಂಯುಕ್ತ ಕರ್ನಾಟಕ ಸೇರಿದಂತೆ ವಿವಿಧ ಪತ್ರಕೆಗಳಲ್ಲಿ ಉನ್ನತ ಹುದ್ದೆಯನ್ನ ನಿಭಾಯಿಸುವ ಮೂಲಕ ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ, ಇಂದು ಅವರ ಅಕಾಲಿಕ ಮರಣ ಪತ್ರಕರ್ತರ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಭಗವಂತ ಅವರ ಕುಟುಂಭಕ್ಕ ದುಖಃವನ್ನು ಭರಿಸು ಶಕ್ತಿ ಕರುಣಿಸಲಿ ಎಂದರು.
ಹಿರಿಯ ಪತ್ರಕರ್ತ ಬಸವರಾಜ ನಂದಿಹಾಳ: ಅವಳಿ ಜಿಲ್ಲೆಯ ದೀಮಂತ ಪತ್ರಕರ್ತರಾಗಿದ್ದ ರಾಮ ಮನಗೂಳಿ ಅವರು ಸಾಕಷ್ಟು ಜ್ಞಾನ ಭಂಡಾರವನ್ನ ಹೊಂದಿದ್ದರು, ಇವರ ಮಾರ್ಗದರ್ಶನದಲ್ಲಿ ಅನೇಕ ಪತ್ರಕರ್ತರು ಬದುಕು ಕಟ್ಟಿಕೊಂಡಿದ್ದಾರೆ ಅವರ ಅಗಲಿಕೆಯಿಂದ ಅವಳಿ ಜಿಲ್ಲೆ ಪತ್ರಕರ್ತ ಬಳಗ ಅನಾಥವಾಗಿದೆ.