ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಬಸವನಬಾಗೇವಾಡಿ:ಮಾ.4: ಪಟ್ಟಣದ ಶ್ರಿ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ ವಿಜಯಪುರ ಸಹಯೋಗದಲ್ಲಿ ಹಮ್ಮಿಕೊಂಡ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ತಾಲೂಕಾ ವ್ಯಧ್ಯಧಿಕಾರಿ ಡಾ, ಶಶಿಧರ ಒತಗೇರಿ, ಹಾಗೂ ತಾಲೂಕಾ ಆಸ್ಪತ್ರೆ ವೈಧ್ಯಾಧಿಕಾರಿ ಡಾ, ಸಾಭೀರ ಪಟೇಲ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಈಗಾಗಲೇ ಭಾರತ ಪೋಲಿಯೋ ಮುಕ್ತ ರಾಷ್ಟವಾಗಿ ಹೊರ ಹೊಮಿದ್ದು, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಸಿಕಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ಅಖಂಡ ತಾಲೂಕಿನ ವ್ಯಾಪ್ತಿಯಲ್ಲಿ 43,6,17 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನ ಹಾಕಿಕೊಳ್ಳಲಾಗಿದ್ದು ಆರಂಭದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಅಖಂಡ ತಾಲೂಕಿನಲ್ಲಿ ನಡೆಯಲಿದೆ ಇಂದು ಬೂತ ಮಟ್ಟದಲ್ಲಿ ಚಾಲನೆಯನ್ನ ನೀಡಲಾಗಿದ್ದು ಮುಂಭರುವ ದಿನಗಳಲ್ಲಿ ಮನೆ ಮನೆಗೆ ತೆರಳಿ 5 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕಲಾಗುವದು ಎಂದರು.
ಈ ಸಂಧರ್ಭದಲ್ಲಿ ಡಾ, ಶಾಕೀರ ಪಟೇಲ, ಹಿರಿಯ ಆರೋಗ್ಯ ನೀರಿಕ್ಷಕ, ರಾಜಶೇಖರ ಚಿಂಚೊಳಿ,ಅಣ್ಣಪ್ಪ ಬಿದ್ನಾಳ, ಚಂದ್ರಶೆಖರ ಹದಿಮೂರ, ಪ್ರಾಣೇಶ ದೇಶಪಾಂಡೆ, ಸಿದ್ದು ಬಾವಿಕಟ್ಟಿ, ಮಾದೇವಿ ಬೇವನೂರ, ಶಿವಲೀಲಾ ದೊಡಮನಿ, ಸುಜಾತಾ ಕಿಶೇರಿ, ಹಾಗೂ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.