ಜಾಲಿಹಾಳಗೆ ಪ್ರಾ.ಕೃ.ಪ.ಸ.ಸಂಘ ಪ್ರಾರಂಭಿಸಲು ಒತ್ತಾಯ
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೪- ಪ್ರತಿ ಹೋಬಳಿ ಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸಿದ್ದು ಆದೇಶದನ್ವಯ ಜಾಲಿಹಾಳ ಗ್ರಾಮದಲ್ಲಿ ಸೊಸೈಟಿ ಪ್ರಾರಂಭಿಸಲು ಅನುಮತಿ ಕೊಡುವಂತೆ ಹಂಚಿನಾಳ ಕ್ಯಾಂಪ್ ( ಶಾಂತಿನಗರ ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶಾಖಾ ವ್ಯವಸ್ಥಾಪಕ ರಿಗೆ ಗ್ರಾಮ ಪಂಚಾಯತಿ ಜಾಲಿಹಾಳ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಾಲಿಹಾಳ ಘಟಕದ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಾಲಿಹಾಳ ಹೋಬಳಿಗೆ ಸಂಬಂಧಿಸಿದಂತೆ ಜಾಲಿಹಾಳ ಸಂಘದ ವತಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭಿಸಲು ತೀರ್ಮಾನಿಸಿ ಈಗಾಗಲೇ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ,ಸೊಸೈಟಿ ಪ್ರಾರಂಭಿಸಲು ಮತ್ತು ಇದರ ಮೂಲಕ ರೈತರ ವ್ಯವಹಾರ ನಡೆಸಿಕೊಂಡು ಹೋಗಲು ಕೂಡಲೇ ನೀಡಬೇಕು ವಿಳಂಬ ಮಾಡಬಾರದು ಎಂದು ಮನವಿ ಪತ್ರ ಮೂಲಕ ಒತ್ತಾಯಿಸಿದರು.
ಜಾಲಿಹಾಳ ಗ್ರಾಮ ಪಂಚಾಯತಿ ಅದ್ಯಕ್ಷರಾದ ಲಕ್ಷ್ಮೀ ,ಉಪಾಧ್ಯಕ್ಷ ಈರಮ್ಮ , ಸದಸ್ಯರಾದ ಶರಣಮ್ಮ ,ಪಾರ್ವತಿ ,ಪಂಪಾಪತಿ ಕುರಿ ,ಕನಕಪ್ಪ , ಶರಣಪ್ಪ ಗುಡದೂರು ,ಶಂಕ್ರಪ್ಪ ಛಲವಾದಿ ,ಹಂಪಮ್ಮ ಝಾನ್ಸಿರಾಣಿ ,ಸಿಂಹಾದ್ರಿ ವೆಂಕಟ ಸುಬ್ಬರಾವ್ ,ವೀರಭದ್ರಪ್ಪ ಸಾಹುಕಾರ ,ವಿರೇಶ ಮತ್ತು ಸಂಘಟನೆ ತಾಲೂಕು ಅದ್ಯಕ್ಷರಾದ ಅಣ್ಣಪ್ಪ ಜಾಲಿಹಾಳ ,ಕಾರ್ಯದರ್ಶಿ ಮೋಹನರಡ್ಡಿ ,ಶಿವನಗೌಡ ,ದೊಡ್ಡಪ್ಪ ನಂದಾಪುರ ,ದುರಗಪ್ಪ ಮುದಗಲ್ , ವಿರೇಶ ಮಡಿವಾಳ ಸೇರಿದಂತೆ ಅನೇಕರು ಮನವಿ ಸಲ್ಲಿಸಿದರು.