ಸಂವಿಧಾನದ ಸದಾಶಯಗಳನ್ನು ನಮ್ಮ ಯುವ ಪೀಳಿಗೆಗೆ ತಿಳಿಸಬೇಕಿದೆ:ಸಚಿವ ಈಶ್ವರ ಬಿ. ಖಂಡ್ರೆ
ಬೀದರ: ಸೆ.16: ಸಂವಿಧಾನದ ಸದಾಶಯಗಳಾದ ಸ್ವಾತಂತ್ರ್ಯ. ಸಮಾನತೆ. ಭಾತೃತ್ವ. ಸಹೋದರತೆಯನ್ನು ನಮ್ಮ ಯುವ ಪೀಳಿಗೆಗೆ ತಿಳಿಸುವ ಸಲುವಾಗಿ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಇಂದು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಭಾನುವಾರ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ. ಜಿಲ್ಲಾ ಪಂಚಾಯತ ಬೀದರ. ಸಮಾಜ ಕಲ್ಯಾಣ ಇಲಾಖೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. ನಗರಾಭಿವೃದ್ಧಿ ಇಲಾಖೆ. ಅರಣ್ಯ. ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ. ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ. ಉನ್ನತ ಶಿಕ್ಷಣ ಇಲಾಖೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಗುರು ಬಸವಣ್ಣನವರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಮಹಾತ್ಮ ಗಾಂಧಿಜೀ ಸೇರಿದಂತೆ ಅನೇಕ ಮಹನೀಯರನ್ನು ಇಂದು ಸ್ಮರಿಸಬೇಕಿದೆ. ಯಾವ ಕಾಲದಲ್ಲಿ ಸಮಾನತೆ ಇರಲಿಲ್ಲ. ಅಸ್ಪ್ಯಶ್ಶತೆ ಜಾರಿಯಲ್ಲಿತ್ತು ಅಂದು ಸುಮಾರು 850 ವರ್ಷಗಳ ಹಿಂದೆ ಬಸವಣ್ಣನವರು ಜಗತ್ತಿನ ಪ್ರಪ್ರಥಮ ಸಂಸತ್ತನ್ನು ರಚಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮ ಸಮಾಜದ ಕನಸನ್ನು ಬಸವಣ್ಣನವರು ಅಂದೇ ಕಂಡಿದ್ದರು.
ಬಸವಣ್ಣನವರ ಸಂಸತ್ತಿನಲ್ಲಿ ವಿವಿಧ ಸಮಾಜದ 770 ಶರಣರಿದ್ದರು. ಮಹಿಳೆಯರ ಸಮಾನತೆಗಾಗಿಯು ಅವರು ಶ್ರಮಿಸಿದ್ದರು. ಅವರ ತತ್ವ ಸಿದ್ದಾಂತಗಳನ್ನು ಅಂಬೇಡ್ಕರರು ಸಂವಿಧಾನದ ಮೂಲಕ ಜಾರಿಗೆ ತಂದು ಎಲ್ಲರಿಗೂ ಸಮಾಜಿಕ ನ್ಯಾಯ ಒದಗಿಸಿದರು. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿ ಕಾರ್ಯಕ್ರಮ ಬಸವಣ್ಣನವರ ಅನುಭವ ಮಂಟಪದಿಂದ ಚಾಲನೆಯಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅನೇಕ ಕನ್ನಡ ಪರ ಸಂಘಟನೆಗಳು. ವಿವಿಧ ಸಂಘ- ಸಂಸ್ಥೆಗಳು. ದಲಿತಪರ ಸಂಘಟನೆಗಳು ಮತ್ತು ಕಾರ್ಯಕ್ರಮದ ಮೆರಗು ತರಲಿರುವ ವಿವಿಧ ಶಾಲಾ- ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿ. ವಿಧ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಸ್ವಾಗತ ಬಯಸುತ್ತೆನೆ ಮತ್ತು ತಮ್ಮೆಲ್ಲರಿಗೂ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಶುಭಾಷಯಗಳು ಎಂದು ಹೇಳಿದರು.
ರಾಜ್ಯದಾದ್ಯಂತ 2500 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಬೀದರ ಜಿಲ್ಲೆಯಲ್ಲಿ 45 ಕಿ.ಮೀ ಇರಲಿದ್ದು. ಇದರಲ್ಲಿ 35 ಸಾವಿರ ಜನ ಭಾಗಿಯಾಗಿದ್ದಾರೆ. ರಾಜ್ಯದಲ್ಲಿ 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಕಳೆದ ವರ್ಷ ಬೀದರ ಜಿಲ್ಲೆಯಲ್ಲಿ 15 ಲಕ್ಷ ಸಸಿಗಳನ್ನು ನೆಡಲಾಗಿದೆ ಈ ವರ್ಷ 18 ಲಕ್ಷ ಸಸಿ ನೆಡಲಿದ್ದೆವೆ. ಇಂದು ಬೀದರ ಜಿಲ್ಲೆಯಲ್ಲಿ 10 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು.
ಇಂದು ಸಮಾಜದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಒಡೆದಾಳುವ ನೀತಿ. ಸೇಡು. ಹಿಂಸೆ. ಅಸೂಯೆ ದಿನೆ ದಿನೆ ಹೆಚ್ಚಾಗುತ್ತಿರುವ ಕಲುಷಿತ ವಾತಾವರಣವನ್ನು ನೋಡುತ್ತಿದ್ದೆವೆ. ನಾವೆಲ್ಲರೂ ಸಹೋದರ ಭಾವದಿಂದ ಬದುಕಬೇಕಿದೆ. ಎಲ್ಲಾ ಜಾತಿ. ಧರ್ಮಗಳ ಜನರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುವ ಮೂಲಕ ಸಂವಿಧಾನದ ಸದಾಶಯಗಳನ್ನು ಅನುಷ್ಠಾನ ಮಾಡುವ ಕೆಲಸ ಮಾಡುತ್ತಿದೆ ಎಂದರು.
ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ. ಸಮಾನತೆ. ಸಹೋದರತ್ವ. ದೇಶದ ಏಕತೆ. ಅಖಂಡತೆಯ ಬಗ್ಗೆ ತಿಳಿಸಬೇಕಿದೆ. ಭವಿಷ್ಯದ ಪ್ರಜೆಗಳು ನಮ್ಮ ಮಕ್ಕಳು ಹಿಂದು. ಮುಸ್ಲಿಂ. ಸಿಖ್. ಇಸಾಯಿ ಎಲ್ಲರೂ ಸಹೋದರರಾಗಿದ್ದಾರೆ ಎಂದು ಹೇಳಿದರು.
ಸಚಿವ ಈಶ್ವರ ಬಿ. ಖಂಡ್ರೆ ಅವರು ಎಲ್ಲರಿಗೂ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿ, ಮಾನವ ಸರಪಳಿ ರಚಿಸಿ ವಿವಿಧ ಶಾಲೆಗಳ ಮಕ್ಕಳನ್ನು ವೀಕ್ಷಣೆ ಮಾಡಿ. ಸಸಿಗಳನ್ನು ನೆಟ್ಟರು. ಬಸವಕಲ್ಯಾಣ ಅನುಭವ ಮಂಟಪದಿಂದ ಬೀದರ ಜಿಲ್ಲೆಯ ಗಡಿ ಹಳ್ಳಿಖೇಡ. ಕೆ ವರೆಗೆ ಸಾವಿರಾರು ಮಕ್ಕಳು ಸರತಿಸಾಲಿನಲ್ಲಿ ನಿಂತು ಕೈ- ಕೈ ಹಿಡಿದು ಮಾನವ ಸರಪಳಿ ರಚಿಸಿ ಗಮನ ಸೆಳೆದರು. ಕೆಲವೊಂದು ಶಾಲೆಯ ಮಕ್ಕಳು ಸಂತ. ಶರಣರು ಹಾಗೂ ರಾಷ್ಟ್ರ ನಾಯಕರ ವಿವಿಧ ವೇಷ ಭೂಷಣಗಳನ್ನು ಧರಿಸಿ ಬಂದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು.
ಈ ಕಾರ್ಯಕ್ರಮದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್, ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೆವರು, ಹಿರೇಮಠ ಸಂಸ್ಥಾನ ಭಾಲ್ಕಿಯ ಗುರುಬಸವ ಪಟ್ಟದ್ದೆವರು, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ವಿವಿಧ ಕನ್ನಡ ಪರ ಸಂಘಟನೆಗಳು, ಸ್ವ- ಸಹಾಯ ಸಂಘಗಳು, ದಲಿತಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.