ಲಿಂಗಾಯತ ದೀಕ್ಷ ಪಂಚಮಸಾಲಿ ಮೀಸಲಾತಿ ಹೋರಾಟ:ಸೆ.22 ರಂದು ವಕೀಲರ ನಡೆ ಬೆಳಗಾವಿಯ ಕಡೆ
ಕಲಬುರಗಿ,ಸೆ 16: ಲಿಂಗಾಯತ ದೀಕ್ಷ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜೀಗಳು ಕೂಡಲಸಂಗಮ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಲಿಂಗಾಯತ ದೀಕ್ಷ ಪಂಚಮಸಾಲಿ ಸಮುದಾಯವನ್ನು ಕರ್ನಾಟಕ ಮೀಸಲಾತಿಯಲ್ಲಿ 2ಎ ವರ್ಗಕ್ಕೆ ಸೇರಿಸಲು ಹಾಗೂ ಕೇಂದ್ರದಲ್ಲಿ ಒಬಿಸಿ ವರ್ಗಕ್ಕೆ ಸೇರಿಸುವಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಒತ್ತಡ ಹೇರುವ ಸಲುವಾಗಿ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುವುದು. ಮತ್ತು7ನೇ ಹಂತದ ಹೋರಾಟ ಪ್ರತಿಫಲ ಎಂಬ ಘೋಷ ವಾಕ್ಯದಂತೆ ಕಲಬುರಗಿ ಜಿಲ್ಲೆ ಹಾಗೂ ತಾಲೂಕು ಮಟ್ಟದಿಂದ ಸುಮಾರು 2000 ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರು ಸೆ.22 ರಂದು ಬೆಳಗಾವಿಯ ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾವೇಶಕ್ಕೆ ಹೋಗಲು ತೀರ್ಮಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ ಅಧ್ಯಕ್ಷ ರವೀಂದ್ರ ಬಬಲೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಮರ ಬಿ. ಖಪಾಟೆಶಿವಶಂಕರ ಬಿ. ಶೀಲವಂತರ,ಸಿದ್ದಣ್ಣಗೌಡ ಪಾಟೀಲ,ನ್ಯಾಯವಾದಿ ಬಸವರಾಜ ಕೆ ಬಿರಾದಾರ, ಪಂಚಸೇನಾ ಅಧ್ಯಕ್ಷ ಸೋಮಶೇಖರ ಬಿ ಮುಗಳೆ ಸೇರಿದಂತೆ ಹಲವರಿದ್ದರು.