ನರಿಬೋಳ ಚಾಮನೂರ ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ
ಕಲಬುರಗಿ.ಸೆ 16: ನರಿಬೋಳಕ್ಕೆ ದೌಡಾಯಿಸಿ ನರಿಬೋಳ ಚಾಮನೂರ ಸೇತುವೆ ಕೆಲಸ ಪ್ರಾರಂಭಿಸುವ ಭರವಸೆ ನೀಡಿ ಪಾದಯಾತ್ರೆ ಮಾಡದಿರಲು ಮನ ಒಲಿಸುವಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷ ಜೇವರಗಿ ಶಾಸಕ ಡಾ.ಅಜಯಸಿಂಗ್ಯ ಶಸ್ವಿಯಾಗಿದ್ದಾರೆ.
ನರಿಬೋಳ ಚಾಮನೂರ ಸೇತುವೆ ಕಾಮಗಾರಿ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಇಂದು ನರಿಬೋಳ ಚಾಮನೂರ ಸುತ್ತಮುತ್ತಲ ಗ್ರಾಮಸ್ಥರು ಪಾದಯಾತ್ರೆ ನಡೆಸಲು ತೀರ್ಮಾನಿಸಿ ತಯಾರಿ ನಡೆಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಸಹ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದರು.ಜೇವರ್ಗಿ ಶಾಸಕ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯಸಿಂಗ ಅವರು ನರಿಬೋಳ ಸೇತುವೆ ಸ್ಥಳಕ್ಕೆ ಭೇಟಿನೀಡಿ ನರಿಬೋಳ ಚಾಮನೂರ ಗ್ರಾಮಗಳ ಮತ್ತು ಪಾದಯಾತ್ರೆ ಮಾಡಲು ನಿರ್ಧರಿಸಿದ್ದ ಪ್ರಮುಖರನ್ನು ಕರೆಸಿ ನಾನು ಈಗಾಗಲೆ ಸಂಬಂಧಿಸಿದ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಗುತ್ತಿಗೆದಾರರಿಗೂ ನಾಲ್ಕು ತಿಂಗಳಲ್ಲಿ ಕಾಮಗಾಗಿ ಮುಗಿಸಲು ಖಡಕ್ ಎಚ್ಚರಿಕೆ ನೀಡಿದ್ದೇನೆ. ಆಗಲೂ ನೆನೆಗುದಿಗೆ ಬಿದ್ದರೆ ಖುದ್ದು ನಾನೆ ನಿಮ್ಮೆಲ್ಲರನ್ನು ಕರೆದುಕೊಂಡು ಮುಖ್ಯಮಂತ್ರಿ ಹತ್ತಿರ ನಿಯೊಗ ತೆಗೆದುಕೊಂಡು ಹೋಗುತ್ತೇನೆ.ದಯವಿಟ್ಟು ಪಾದಯಾತ್ರೆ ಮಾಡಬೇಡಿ ಎಂದು ವಿನಂತಿಸಿದರು. ಆಗ ಸ್ಥಳದಲ್ಲಿದ್ದ ಪಾದಯಾತ್ರೆಯ ನೇತೃತ್ವವನ್ನು ವಹಿಸಿದ್ದ ಎಂ ಎಸ್ ಪಾಟೀಲ ನರಿಬೋಳ ,ಶರಣಗೌಡ ಪಾಟೀಲ ಚಾಮನೂರ, ಶರಣಗೌಡ ಪೆÇೀಲಿಸ್ ಪಾಟೀಲ, ನರಿಬೋಳ, ರಾಘವೇಂದ್ರ ಕುಲಕರ್ಣಿ, ಗುರುರಾಜ ಟಣಕೆದಾರ, ಭೀಮರಾಯ ಖಾಖಂಡಕಿ ಸೇರಿದಂತೆ ಪ್ರಮುಖರು ಪಾದಯಾತ್ರೆ ಹಿಂಪಡೆದುಕೋಳ್ಳುತ್ತೇವೆ ಎಂದು ತಿಳಿಸಿದರು.