ಚನ್ನಮಲ್ಲೇಶ್ವರ ನಗರದಲ್ಲಿ 9 ದಿನಗಳ ಗಣೇಶ ಉತ್ಸವ
ಕಲಬುರಗಿ,ಸೆ.16: ಚನ್ನಮಲ್ಲೇಶ್ವರ ನಗರದಲ್ಲಿ ಸೂಪರ ಸ್ಟಾರ್ ಗಣೇಶ ಮಂಡಳಿಯವರಿಂದ ಮಹಾಪ್ರಸಾದ ವಿತರಣೆ ನಡೆಯಿತು.ನಿರಂತರ 9 ದಿನಗಳ ಕಾಲ ಪೂಜೆಯನ್ನು ಅತಿ ವಿಜೃಂಭಣೆಯಿಂದ ನೆರವೇರಿಸಲಾಯಿತು.ಅಧ್ಯಕ್ಷರಾದ ಅಜೀತ ಮುನ್ನಾಳಕರ್ ಉಪಾಧ್ಯಕ್ಷ ಅಭಿಷೇಕ ಮರಾಠ, ಕಾರ್ಯದರ್ಶಿ ಕೇದಾರನಾಥ ಎಲ್ಮಡಗಿ, ಅಭಿಷೇಕ ನಾಲ್ನೋಡಿ, ಬಸವರಾಜ ಬನ್ನೂರ, ಯುವರಾಜ ಸಿಂಗ ಠಾಕೂರ, ಸಚಿನ ಮುನ್ನಾಳಕರ್, ರಾಕೇಶ ಸ್ಥಾವರ ಮಠ, ಅಭೀಷೇಕ ಉಡಗಿ, ಸಾಗರ ಹೌಶೆಟ್ಟಿ, ಚಿಕ್ಕವೀರೇಶ ಶೀಲವಂತ, ಸೋನು ಶೀಲವಂತ ಮತ್ತು ಅಂಬರೇಶ ಮಗ್ಗಿ ಸೇರಿದಂತೆ ಬಡಾವಣೆಯ ಎಲ್ಲಾ ಸದ್ಭಕ್ತರು ಉಪಸ್ಥಿತರಿದ್ದರು ಎಂದು ನಗರದ ವಿಶ್ವರಾಧ್ಯಾ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬುಲಗಿ ತಿಳಿಸಿದ್ದಾರೆ.