ಶಂಕರಲಿಂಗ ಮಹರಾಜರ 41 ದಿವಸ ಅನುಷ್ಠಾನ ಸಮಾರೋಪ
ಭಾಲ್ಕಿ :ಸೆ.16:ತಾಲೂಕಿನ ಕಾಸರತುಗಾವ ವಾಡಿ ಗ್ರಾಮದ ಶ್ರೀಧಡ್ಡೆಶ್ವರ ಮಹಾ ತಪಸ್ವಿಗಳ ತಪೆÇೀವನದ ಮಡ್ಡಿ ಮಹದೇವದ ತಪೆÇವನದಲ್ಲಿ ಶ್ರೀ ಶಂಕರಲಿಂಗ ಮಹಾರಾಜರು 41 ದಿವಸಗಳ ಕಾಲ ಅನುಷ್ಠಾನ ಸಮಾರೋಪ ಸಮಾರಂಭ ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರಘ ರಾಜೇಂದ್ರ ಮಹಾಸ್ವಾಮಿಗಳು ಮುಗಳಖೋಡ ಜಿಡಗಾ ಮಠ ವಹಿಸಿ ಮಾತನಾಡಿ ಅನೇಕ ಮಹಾತ್ಮರು, ಪುರುಷರು ತಪ್ಪಸ್ಸು ಗೈದು, ಲೋಕಕಲ್ಯಾಣಕ್ಕಾಗಿ ಕಾರ್ಯವನ್ನುಮಾಡಿದಾರೆ, ಜಾತಿ ಭೇದ ಅನ್ನಲಾರದೆ , ಇಡೀ ಸಮಾಜವೇ ಒಂದು ಎನ್ನುವಂತ ಕಲ್ಪನೆ ಮೂಡಬೇಕು, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದರು.
ಕಾರ್ಯಕ್ರಮದ ಸಮ್ಮುಖವನ್ನು ಪರಮಪೂಜ್ಯರು ಶ್ರೀ ಷ. ಬ್ರ. ವಿರುಪಾಕ್ಷ ಶಿವಾಚಾರ್ಯರು ಹುಡಗಿ ಮಠ, ಪರಮಪೂಜ್ಯರು ಶ್ರೀ ಷ. ಬ್ರ. ರಾಜೇಶ್ವರ್ ಶಿವಾಚಾರ್ಯರು ಮೆಹಕರ, ಪರಮಪುಜ್ಯರು ಶ್ರೀ, ಷ. ಬ್ರ. ಹಾವಾಗಿಲಿಂಗ ಶಿವಾಚಾರ್ಯರು ಶಿವಣಿ, ಆಶೀರ್ವಚನ ನೀಡಿದರು, ಅದೇ ರೀತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಈಶ್ವರ್ ಬಿ ಖಂಡ್ರೆ[ ಅರಣ್ಯ ಜೈವಿಕ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ]ವಹಿಸಿಕೊಂಡು ಮಾತನಾಡಿ
41 ದಿವಸ ಅನುಷ್ಠಾನ ಗೈಯುವುದು ಸಾಧಾರಣ ಮಾತಲ್ಲ, ಇಂಥ ಲೋಕಕಲ್ಯಾಣಕ್ಕಾಗಿ ಅನೇಕ ಮಹಾತ್ಮರು ಅನೇಕ ಪುರುಷರ ಹುಟ್ಟಿ ಧರ್ಮರಕ್ಷಣೆ ಮಾಡಿದ್ದಾರೆ, ಅನೇಕ ಸಂತರು ಪುರುಷರು ಶರಣರು, ಎಲ್ಲಾ ಧರ್ಮಒಂದು ಎನ್ನುವ ರೀತಿಯಲ್ಲಿ ಸಮಾನತೆ ಸಾರಿದಾರೆ ಎಂದು ಹೇಳಿದರು. ಕಾರ್ಯಕ್ರಮದ ಕಾರ್ಯಾಧ್ಯಕ್ಷರು ಶಿವರಾಜ್ ಕೆ ಪಾಟೀಲ್, ಮಹಾದೇವ ಮಂದಿರ ನಿರ್ಮಾಣ ವೆಚ್ಚ ದಾನಿಗಳಾದ ಶುಭಾಷ ಪಾಟೀಲ್ ವಾಡಿ, ಕಾರ್ಯಕ್ರಮದ ಮುಖಂಡರಾದ ರಮೇಶ್ ಪಾಟೀಲ್, ಅರವಿಂದ್ ಜಮಾದಾರ್, ಮಾರುತಿ ಬಿರಾದಾರ್,ಅಶೋಕ್ ರಾಘವ ತುಗಾoವ, ಸಂಗ್ರಾಮ ಪಾಟೀಲ್ ದಳಪತಿಗಳು ತುಗಾoವ, ಇಂದ್ರಜಿತ ಪಾಟೀಲ್, ನಿತೇಶ್ ಪಾಟೀಲ್,ಕಾಶೀನಾಥ್ ಬಿರಾದಾರ್, ಕಾಶೀನಾಥ್ ಧಡ್ದೆ, ಮಡೆಪ್ಪ ಪಾಟೀಲ್,ಸೂರ್ಯಕಾಂತ್ ಮಾಮುಡಗೆ,ದಯಾನಂದ್ ಬಿರಾದಾರ್, ಕಲ್ಯಾಣಿ ಮಾಮೂಡಗೆ, ಯೌಗೇಶ ಮಾಮೂಡಗೆ, ಕೈಲಾಸ್ ಪಾಟೀಲ್ ಶಿವಣಿ, ಶಾರದ ಪಾಟೀಲ್, ಸಂಗಮೇಶ ಪಾಟೀಲ್ ಬೊಳೆಗಾವ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಸಾವಿರಾರು ಸದ್ಭಕ್ತರು ಉಪಸ್ಥಿತರಿದ್ದರು, ಮಲ್ಲಿಕಾರ್ಜುನ್ ಪಾಟಿಲ್ ಸ್ವಾಗತಿಸಿದರು, ದೀಪಕ್ ಠಮಕೆ ನಿರೂಪಿಸಿದರು.