ಕೋಟೆಯ ಕಂದಕ ಕಬಳಿಕೆ ತೆರವಿಗೆ ಆಗ್ರಹ
ರಾಯಚೂರು.ಮಾ.೪- ನಗರದ ಎಲ್.ಐ.ಸಿ ಕಛೇರಿಯ ಮುಂದಿನ ಕೋಟೆಯ ಕಂದಕವನ್ನು ಆಕ್ರಮಿಸುಕೊಂಡು ಕಟ್ಟುತ್ತಿರುವ ಕಟ್ಟಡವನ್ನು ತೆರೆವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಎಲ್‌ಐಸಿ ಮುಂಭಾಗ ಕೆಇಬಿ ಪಕ್ಕದಲ್ಲಿ ಇರುವ ಕೋಟೆಯ ಕಂದಕ ಜಾಗವನ್ನು ಒತ್ತುವರಿ ಮಾಡಿಕೊಂಡು ಖಾಸಗಿ ವ್ಯಕ್ತಿಗಳು ಕಟ್ಟಡವನ್ನು ಕಟ್ಟುತ್ತಿದ್ದಾರೆ ಎಂದು ದೂರಿದರು. ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಇದೇ ಸ್ಥಳದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ದೂರಿನ ಮೇರೆಗೆ ಅಧಿಕಾರಿಗಳು ಅಕ್ರಮ ಕಟ್ಟಡ ತೆರವುಗೊಳಿಸಿದರು.ಆದರೆ ಇತ್ತೀಚಿಗೆ ಮೂರು ನಾಲ್ಕು ದಿನಗಳಿಂದ ಹಗಲು ರಾತ್ರಿ ಎನ್ನದೇ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಾದ ನಗರಸಭೆ ಅಧಿಕಾರಿಗಳು ಯಾರು ಈ ಕಡೆ ಗಮನ ಹರಿಸಿಲ್ಲ. ಆದರೆ ಕೆಲವು ತಿಂಗಳ ಹಿಂದೇ ಕೆ.ಇ.ಬಿ. ಮುಂದುಗಡೆ ಯಾರೋಬ್ಬ ಸಣ್ಣ ಡಬ್ಬಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ಕುರಿತು ದೂರು ನೀಡಿದ ಹಿನ್ನಲೆ ಡಬ್ಬಿಯನ್ನು ತೆರವುಗೊಳಿಸಲಾಗಿತ್ತು ಆದರೆ ಕೋಟೆಯ ಕಂದಕವನ್ನು ಒತ್ತುವರಿ ಮಾಡಿ ಕಟ್ಟಡವನ್ನು ಕಟ್ಟುತ್ತಿದ್ದರು ಯಾಕೆ ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲಾ, ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡ ಇದೆ ಎಂದು ಆರೋಪಿಸಿದರು.ಈ ಕೂಡಲೇ ನಗರಸಭೆ ಅಧಿಕಾರಿಗಳಿಗೆ ಅದೇಶ ಜಾರಿ ಮಾಡಿ ಕೋಟೆಯ ಕಂದಕವನ್ನು ಒತ್ತುವರಿ ಮಾಡುವವರ ವಿರುದ್ಧ ಕ್ರೀಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ನಿರ್ಲಕ್ಷ ಮುಂದುವರಿದರೆ ಹೋರಾಟದ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶರಣಪ್ಪ ದಿನ್ನಿ, ಶ್ರೀನಿವಾಸ್, ಹನುಮಂತ ನಾಯಕ, ಚನ್ನಬಸವ ಯಾಕ್ಲಸಪೂರು ಸೇರಿದಂತೆ ಉಪಸ್ಥಿತರಿದ್ದರು.