ನೀರು ವ್ಯತ್ಯಯ ಸರಿಪಡಿಸದಿದ್ದರೆ ಹೋರಾಟ
ರಾಯಚೂರು.ಮಾ.೪- ನಗರದಲ್ಲಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಕರವೇ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಜೈನ್ ಎಚ್ಚರಿಸಿದ್ದಾರೆ.
ರಾಯಚೂರು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗಣಕಲ್ ಜಲಾಶಯಕ್ಕೆ ಕೃಷ್ಣ ನದಿಯಿಂದ ನೀರು ಭರ್ತಿ ಮಾಡಲಾಗಿದೆ. ಈ ನೀರನ್ನು ರಾಯಚೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಹರಿಸಲಾಗಿದೆ. ಆದರೆನಗರಕ್ಕೆ ಮಾತ್ರ ೨ ರಿಂದ ೩ ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತದೆ ಎಂದು ಅಶೋಕ್ ಜೈನ್ ಆರೋಪಿಸಿದ್ದಾರೆ.
ನಗರಾದ್ಯಂತ ಅವೈಜ್ಞಾನಿಕ ನೀರು ಸರಬರಾಜು ವ್ಯವಸ್ಥೆಯ ನೀರಿನ ಹಾಹಾಕಾರಕ್ಕೆ ಕಾರಣವಾಗಿದೆ. ನೇರವಾಗಿ ಕೆಲ ವಾರ್ಡ್‌ಗಳಲ್ಲಿ ನೀರು ಪೂರೈಕೆ ಮಾಡುತ್ತಿರುವುದು ಇನ್ನಿತರ ವಾರ್ಡ್‌ಗಳಲ್ಲಿ ನೀರಿನ ಕೊರತೆ ಸೃಷ್ಟಿಸಿದೆ. ರೈಸಿಂಗ್ ಪೈಪ್ ಮೂಲಕ ಕೆಲಕಡೆ ನೇರ ನೀರು ಪೂರೈಕೆ ವ್ಯವಸ್ಥೆಯ ಸ್ಥಗಿತಗೊಳಿಸಬೇಕು, ಬೈಪಾಸ್ ಪೈಪ್‌ಗಳನ್ನು ಅಕ್ರಮ ನಳಸಂಪರ್ಕವನ್ನು ನಗರಸಭೆ ಪತ್ತೆ ಹಚ್ಚಿ ಕಡಿತಗೊಳಿಸಬೇಕು. ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚನೆ ಮಾಡಬೇಕೆಂದು ಜೈನ್ ಆಗ್ರಹಿಸಿದ್ದಾರೆ.
ನಗರಾದ್ಯಂತ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿ ನಡೆಯಲು ಕರವೇ ತೀವ್ರವಾಗಿ ಖಂಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ನಗರ ಸಭೆ ನೀರು ಪೂರೈಕೆ ವಿಭಾಗ, ನೀರು ಪೂರೈಕೆಯಲ್ಲಿಆಗಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ ನಗರಕ್ಕೆ ಸಂಪರ್ಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯಿಸಿದರೆ ನಗರಸಭೆ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.