ಹಕ್ಕು ಪತ್ರ ನೀಡುವಂತೆ ಒತ್ತಾಯ
ಸಂಜೆವಾಣಿ ವಾರ್ತೆ
ಕಾರಟಗಿ:ಮಾ:04: ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರರಿಗೆ ಮನೆಗಳ ಹಕ್ಕ ಪತ್ರ ನೀಡಲು ಯುವ ಕರ್ನಾಟಕ ಭೀಮ್ ಸೇನಾ ಶಕ್ತಿ ಸಂಘ ವತಿಯಿಂದ ಶುಕ್ರವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷ ನಿಂಗರಾಜ್ ಚಲುವಾದಿ ಮಾತನಾಡಿ ಬೂದಗುಂಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಇದುವರೆಗೂ ನಿವೇಶನದ ಹಕ್ಕು ಪತ್ರ ಸಿಕ್ಕಿರುವುದಿಲ್ಲ, ಸಂಬಂಧ ಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರು ಸಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ, ಅದಕ್ಕೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು ದಿನ್ಯನಿತ್ಯ ಫಲನುಭವಿಗಳು ತಾಲೂಕು ಕಛೇರಿಗೆ ಅಲೆದಾಡುವ  ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು,
ಬೂದಗುಂಪಾ ಗ್ರಾಮದ ಜಮೀನು ಸರ್ವೆ ನಂ: 134ರಲ್ಲಿ ಬರುವ 400 ಮನೆಗಳ ಹಕ್ಕು ಪತ್ರಗಳು ಸುಮಾರು ವರ್ಷಗಳಿಂದ ಕೊಟ್ಟಿರುವುದಿಲ್ಲಾ
ತಹಸೀಲ್ದಾರ್ ಅವರು ದಲಿತ ಸಮುದಾಯದ ಕಾಳಜಿ ವಹಿಸಿ, ಮನೆಗಳು ಹಕ್ಕು ಪತ್ರ ಒದಗಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳು, ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು,
One attachment • Scanned by Gmail