ವಿಜಯನಗರದ ರೈತರ ನಿರ್ಲಕ್ಷ್ಯ ಮುಖ್ಯಮಂತ್ರಿಗಳ ಮುಂದೆ ಅಸಮಾಧಾನ ಹೊರ ಹಾಕಿದ ರೈತರು.
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ4: ಕಳೆದ 9 ವರ್ಷಗಳಿಂದ ಸಕ್ಕರೆ ಕಾರ್ಖಾನೆ ಇಲ್ಲದ ಹೊಸಪೇಟೆ ಸೇರಿದಂತೆ ಈ ಭಾಗದ ರೈತರು ಪರಿತಪಿಸುತ್ತಿದ್ದರೂ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ ಮುಖ್ಯಮಂತ್ರಿಗಳ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಕಮಲಾಪುರದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿಗಳ ಮುಂದೆ ರೈತ ನಿಯೋಗ ಈ ಕುರಿತು ಮನವಿ ಸಲ್ಲಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಹೊಸಪೇಟೆ ಭಾಗದಲ್ಲಿ 6000-12000 ಎಕರೆ ಕಬ್ಬು ಬೆಳೆಯುತ್ತಿದ್ದು, ರೈತರಿಗೆ ಧರ 1ಟನ್‍ಗೆ 600 ರೂಪಾಯಿಗಳಂತೆ ನಷ್ಟವಾಗುತ್ತಿದೆ. ಹಾಗಾಗಿ ತಮ್ಮ ಗಮನಕ್ಕೆ ಬಂದಿದ್ದು, ಅದನ್ನು ಕಳೆದ ಬಜೆಟ್‍ನಲ್ಲಿ ಮಂಡಿಸಿರುವುದಿಲ್ಲ. ಇದರ ಬಗ್ಗೆ ಮನವಿಯನ್ನು ಸಹ ಸಲ್ಲಿಸಿದ್ದೇವೆ. ಇದನ್ನು ತಮ್ಮಲ್ಲಿ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟದಲ್ಲಿ ನಮ್ಮ ಹಂಪಿ ಶುಗರ್ ಬಗ್ಗೆ ಕೈ ಎತ್ತಿ ಎಂದು ನಿರ್ಮಾಣವನ್ನು ಮಾಡಬೇಕೆಂದು ಕೋರಿದರು.
ಕೆರೆ ತುಂಬು ಯೋಜನೆಯನ್ನು ಸರ್ಕಾರ 232ಕೋಟಿ 33ಲಕ್ಷ ಸರ್ಕಾರದಿಂದ ಬಿಡುಗಡೆಯಾಗಿದ್ದು ಇಲ್ಲಿಗೆ 4ವರ್ಷಗಳಾದರು ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರಭಾವಿ ರಾಜಕಾರಣಿಗಳು ಅದನ್ನು ತಡೆಗಟ್ಟುತ್ತಿದ್ದಾರೆ. ತಾವುಗಳು ಅದನ್ನು ಪರಿಶೀಲಿಸಿ ಆದಷ್ಟು ಬೇಗ ರೈತರ ನೀರಾವರಿಯನ್ನು ಕೆರೆ ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸುವಂತೆಯೂ ಆಗ್ರಹಿಸಿದರು.
ಪೂರ್ವದಿಂದ ಉಳುಮೆ ಮಾಡುತ್ತಿರುವ ಅರಣ್ಯದಂಚಿನ ರೈತರಿಗೆ ಪಟ್ಟಾ ನೀಡಬೇಕು, ಜಿಲ್ಲೆಯ ಎಲ್ಲಾ ಕೆರೆಗಳಿಗೆ ತುಂಗಭದ್ರ ನದಿಯಿಂದ ನೀರು ತುಂಬಿ¸ಬೇಕು, ಡಿ.ಎಂ.ಎಫ್. ನಿಧಿ ಹಣವನ್ನು ಶೇಕಡ 50% ರೈತರ ಅನುಕೂಲಕ್ಕಾಗಿ ಬಳಸಬೇಕು, ಗಣಿ ಮತ್ತು ಕಾರ್ಖಾನೆಗಳು ಹಾಗೂ ಹೊಗೆ ಇಂದಾಗಿ ಬೆಳೆ ಹಾಳಾಗುತ್ತಿದ್ದು, ದೂಳಿನ ಪರಿಹಾರ ಎಕರೆಗೆ ರೂ 10ಸಾವಿರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.