ವೀ.ವಿ.ಸಂಘದ ಚುನಾವಣೆ ಓಟಿಗಷ್ಟೇ ಬಳಸಿಕೊಳ್ಳಬೇಡಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.04: ನಮ್ಮನ್ನು ಕೇವಲ ಓಟಿಗಷ್ಟೇ ಬಳಸಿಕೊಳ್ಳಬೇಡಿ ಎಂಬುದು ವೀರಶೈವ ವಿದ್ಯಾವರ್ಧಕ ಸಂಘದ ಅನೇಕ ಆಜೀವ ಸದಸ್ಯರ ಅನಿಸಿಕೆಯಾಗಿದೆ.
ಮಾ 17 ರಂದು ನಡೆಯುವ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ 71 ಅಭ್ಯರ್ಥಿಗಳು ಮತಯಾಚನೆಗಾಗಿ ಮನೆ ಮನೆಗೆ ಭೇಟಿ ನೀಡಿದಾಗ. ಅವರಿಗೆ ಮತದಾರರು ಕೇಳುವ ಪ್ರಶ್ನೆ ಇದಾಗಿದೆ.
ಚುನಾವಣೆ ಬಂದಾಗ  ಮೂರು ವರ್ಷಕ್ಕೊಮ್ಮೆ ಭೇಟೆ ಮಾಡಿದರೆ ಸಾಲದು. ಸಂಘದ ಶಾಲಾ ಕಾಲೇಜುಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಸಂಘದ ಸದಸ್ಯರನ್ನು  ಕರೆ ಮಾಡಿ ಕರೆಯಬೇಕು ಎಂಬುದು ಹಗರಿಬೊಮ್ಮನಗಳ್ಳಿ ತಾಲೂಕಿನ ಹಂಪಸಾಗರದ ಸಂಘದ ಅಜೀವ ಸದಸ್ಯ ಪ್ರಕಾಶ್ ಅವರ ಅನಿಸಿಕೆಯಾಗಿದೆ.
ಹಡಗಲಿ, ತಂಬ್ರಳ್ಳಿ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕರೆಯಿರು. ನಾವೇ ನಮ್ಮ ಕರ್ಚು ಇಟ್ಟುಕೊಂಡು ಬರುತ್ತೇವೆ ಎಂದಿದ್ದಾರೆ.
ಇನ್ನು ತಂಬ್ರಳ್ಳಿಯಲ್ಲಿ ಅಕ್ಕಿ ಶಿವಕುಮಾರ್,  ಸುರೇಶ್ ತಂಬ್ರಳ್ಳಿ ಅವರು ನಮ್ಮೂರಿಗೆ ಪ್ರಥಮ ದರ್ಜೆ ಕಾಲೇಜು, ಕಿಂಡರ್ ಗಾರ್ಟನ್  ಶಾಲೆ ಸಹ ಆಗಬೇಕು.
ಆರು ಎಕರೆ ಜಾಗ ಇದೆ. ಬೊಮ್ಮನಹಳ್ಳಿಯಲ್ಲಿ ಮಾತ್ರ ವಿಜ್ಞಾನ ಕಾಲೇಜಿದೆ. ನಮ್ಮೂರಿನಲ್ಲಿ ಮಹಿಳಾ ವಿಜ್ಞಾನ ಕಾಲೇಜು ಮಾಡಿ ಎಂದಿದ್ದಾರೆ.
ಈ ಮೊದಲು ಸಂಘದಿಂದ ಹಣ ತರಿಸಿಕೊಂಡು ಇಲ್ಲಿನ ಕಾಲೇಜು ನಡೆಸುತ್ತಿತ್ತು. ಈಗ ಶುಲ್ಕ ಹೆಚ್ಚಿಸಿ ಸಂಘಕ್ಕೆ 20 ಲಕ್ಷ ನೀಡುತ್ತಿದೆ.ಹೈಸ್ಕೂಲ್ ನಲ್ಲಿ  300 ವಿದ್ಯಾರ್ಥಿಗಳಿದ್ದಾರೆಂದು ತಿಳಿಸಿದರು.