ಪುಟ್ಟರಾಜ ಕವಿಗವಾಯಿಗಳ ಜನ್ಮದಿನಾಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.04: ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಬಳ್ಳಾರಿ ಹಾಗೂ ಪಾರ್ವತಿ ನಗರ ಶಾಸ್ತ್ರಿ ನಗರದ ಅನಾದಿ ಲಿಂಗೇಶ್ವರ ಪುರಾಣ ಸಮಿತಿ ಸಹಕಾರದೊಂದಿಗೆ ದಿನಾಂಕ 03/03/2024ರಂದು ಗಾನಯೋಗಿ ಶಿವಯೋಗಿ ತ್ರಿಭಾಷಾ ಕವಿ ಚಕ್ರವರ್ತಿಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 110ನೇ ಜನ್ಮದಿನಾಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಕನ್ನಡಪ್ರಭ ವರದಿಗಾರರು ಕೆಎಂ ಮಂಜುನಾಥ್ ಮತ್ತು ಲೆಕ್ಕ ಪರಿಶೋಧಕರಾದ ಸಿದ್ಧ ರಾಮೇಶ್ವರ ಗೌಡರು ಪುಟ್ಟ ರಾಜಗುರುಗಳ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಚಾಲನೆ ಮಾಡಿದರು ಹಿರಿಯ ತಬಲವಾದ ಕರು ಉಮೇಶ್  ಸಂಡೂರು ದೊಡ್ಡ ಬಸವ ಗವಾಯಿ ಡಿ ಕಗ್ಗಲ್  ದೇವಸ್ಥಾನದ ಪ್ರಧಾನ ಅರ್ಚಕರು ವೀರೇಶ್ ಕಾರ್ಯಕ್ರಮದಲ್ಲಿಇದ್ದರು ವೀರೇಶ್ವರ ಪುಣ್ಯಶ್ರಮದ ಶೇಖರಯ್ಯ ಶಾಸ್ತ್ರಿಗಳು ರೋಣ ಇವರು ಪುಟ್ಟರಾಜ ಗುರುಗಳ ಕುರಿತು ವಿಶೇಷ ಭಾಷಣ  ಮಾಡಿದರು  ಯೋಗೀಶ್ವರಿ ಗೌರಿ ಮೇಘನಾ ಮನೋಜ್ಞ ಸಮನ್ವಿತ ಪಾವನಿ ವೀರ ಪಂಚಾಕ್ಷರಿ ತಪಸ್ವಿ ಅನೇಕ ಮಕ್ಕಳಿಂದ ಪುಟ್ಟರಾಜ ಗುರುಗಳು ರಚಿಸಿದ ಅನೇಕ ಗೀತೆಗಳು ಹಾಡಲಾಯಿತು ಕಾರ್ಯಕ್ರಮದಲ್ಲಿ ಶಾಸ್ತ್ರಿ ನಗರ ಪಾರ್ವತಿ ನಗರ ತಾಳೂರುರೋಡ್ ಇನ್ನು ಅನೇಕ ಕಡೆಗಳಿಂದ ಬಂದ ಜನಸ್ತೋಮ ಸೇರಿತ್ತು