ಕೊನೆ ಭಾಗಕ್ಕೆ ತಲುಪದ ನೀರು; ಉಸ್ತುವಾರಿ ಸಚಿವರ ಬೇಜಾವಾಬ್ದಾರಿಗೆ ಶಾಸಕ‌ ಬಿ.ಪಿ‌.ಹರೀಶ್ ಖಂಡನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.4; ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ ಕೊನೆ ಭಾಗದ ರೈತರಿಗೆ ನೀರು‌ಸಿಗದೆ ಅನ್ಯಾಯವಾಗಿದೆ ಆದರೆ ಸಚಿವರು ರೈತರ ಬಗ್ಗೆ ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂದು ಶಾಸಕ‌ ಬಿ.ಪಿ‌.ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌
ಭದ್ರಾ ಜಲಾಶಯದ ನಾಲೆ ಹೊಂದಿರುವ ದಾವಣಗೆರೆ ಜಿಲ್ಲೆಗೆ ಸಚಿವರು ಭದ್ರ ಜಲಾಶಯದ ನೀರನ್ನು‌ಕೊನೆ ಭಾಗದ ಗ್ರಾಮಗಳಿಗೆ ನೀರು‌ ಮುಟ್ಟಿಸುವಲ್ಲಿ ಸಂಪೂರ್ಣವಾಗಿ ಎಡವಿದ್ದಾರೆ.
ಭದ್ರಾ ಕಾಡಾ ಜವಾಬ್ದಾರಿಯನ್ನು ನೀರಾವರಿ ಸಚಿವರು ಶಿವಮೊಗ್ಗ ಜಿಲ್ಲೆಯ ಸಚಿವರಾದ ಮಧುಬಂಗಾರಪ್ಪ ಅವರಿಗೆ ನೀಡಿದ್ದಾರೆ ಆದರೆ ಸಚಿವ ಮಧು ಬಂಗಾರಪ್ಪ ‌ಅವರು ಶಿವಮೊಗ್ಗ ‌ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು‌ ಆರೋಪಿಸಿದರು.ದಾವಣಗೆರೆ ಜಿಲ್ಲೆಯ ರೈತ ಬಗ್ಗೆ ಕಾಳಜಿ‌ ವಹಿಸಬೇಕಾಗಿದ್ದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್  ಜವಾಬ್ದಾರಿ ವಹಿಸಲಿಲ್ಲ.
ಹಾಗೂ ಯಾವುದೇ ಹೋರಾಟ‌ ಮಾಡಲಿಲ್ಲ ಅವರಿಗೆ ಜಿಲ್ಲೆಯ‌ ರೈತರ ಹಿತ ಬೇಕಾಗಿಲ್ಲ ಎಂದರು.ಶಿವಮೊಗ್ಗ ಜಿಲ್ಲೆಯ ರೈತರ ಉದ್ದೇಶ ಅವರ ತೋಟ ಉಳಿಸಲು‌  ಜಲಾಶಯದಲ್ಲಿ  ಹೆಚ್ವು ನೀರು ಇರಬೇಕು ಎಂಬುದಾಗಿದೆ. ಹತ್ತು ದಿನ‌ನೀರು ಬಿಟ್ಟರೆ ನಮ್ಮ ತೋಟಕ್ಕೆ‌ಸಾಕು‌  ನೀರು‌ನಿಲ್ಲಿಸಿದರೆ ಜಲಾಶಯದಲ್ಲಿ‌  ನೀರು ಉಳಿಯುತ್ತದೆ ಎಂಬ ಭಾವನೆ ಮೇಲ್ಬಾಗದ ರೈತರದ್ದಾಗಿದೆ.ಮೇಲ್ಬಾಗದ ರೈತರ ಉದ್ದೇಶಕ್ಕೆ  ಸಚಿವ ಮಧು‌ ಬಂಗಾರಪ್ಪ ಸ್ಪಂದಿಸಿದರು. ಆದರೆ ಎಸ್ ಎಸ್ ಮಲ್ಲಿಕಾರ್ಜುನ್  ರೈತ ಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.ನಿನ್ನೆಯಷ್ಟೇ ನಿಗಮ ಮಂಡಳಿಗಳ‌ಪಟ್ಟಿ ಬಿಡುಗಡೆಯಾಗಿದೆ ಕಾಡಾ ಅಧ್ಯಕ್ಷ ಸ್ಥಾನ ಚಿಕ್ಕಮಗಳೂರಿಗೆ ಲಭಿಸಿದೆ ಇದರಿಂದ ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ.ಕೇವಲ ೧೨ ದಿನ‌ನೀರು ಬಿಟ್ಟರೆ ಕೊನೆ ಭಾಗಕ್ಕೆ ತಲುಪುವುದಿಲ್ಲ.ಕೊನೆ ಭಾಗದ ರೈತರ ನೋವಿಗೆ ಮಲ್ಲಿಕಾರ್ಜುನ್ ಕಾರಣ ಮುಂದಿನ ದಿನದಲ್ಲಿ‌ಇನ್ನೊಂದು ಬಾರಿ‌ ನೀರು ಹರಿಸಲಾಗುತ್ತದೆ ಈ ವೇಳೆಯಾದರೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್  ನೀರು ಹರಿಸಲು‌ಕ್ರಮ ಕೈಗೊಳ್ಳಲಿ ಎಂದರು.ಸಚಿವ ಎಸ್ ಎಸ್ ಎಂ
ಕೊನೆ ಭಾಗದರೈತರ ಕಷ್ಟಕ್ಕೆ ಸ್ಪಂದಿಸದಿರುವುದನ್ನು ನೋಡಿದರೆ ಮಲ್ಲಿಕಾರ್ಜುನ್ ಅವರ ಕೈಗಾರಿಕೆ ಇದರಿಂದ ಲಾಭ ಇದೆಯೇ ಎನಿಸುತ್ತದೆ ಸಚಿವರಿಗೆ‌ ಬಡ ರೈತನಿಗಿಂತ ಕಾರ್ಖಾನೆ ಮುಖ್ಯವೇ ಎನಿಸುತ್ತದೆ.
ಯಾವ ಸಂದರ್ಭದಲ್ಲಿ ಕೂಡ ಎಸ್ ಎಸ್ ಎಂ  ಮಧು ಬಂಗಾರಪ್ಪಗೆ ಒತ್ತಡ ಹಾಕಲಿಲ್ಲ‌ ಎಂದು ಆರೋಪಿಸಿದರು. ಸರ್ಕಾರ ಬಜೆಟ್ ಅಧಿವೇಶನ ನಡೆಸಿದ ವೇಳೆ ಬರಗಾಲದ ಬಗ್ಗೆ ಕುಡಿಯುವ ನೀರಿನ‌ ವಿಚಾರವಾಗಿ  ಮಾತನಾಡಲಿಲ್ಲ.  ಕಾಂಗ್ರೆಸ್ ‌ಜನರ ಜೀವ ಉಳಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿದರು.  ಸದನ ಪೂರ್ತಿ ಕಾಂಗ್ರೆಸ್ ನವರು ಕೇಂದ್ರದ ಮೇಲೆ ಘರ್ಷಣೆ ಮಾಡುವ ರೀತಿಯಲ್ಲಿ ಮಾತನಾಡಿದ್ದು  ಖಂಡನೀಯ.ನೊಂದಿರುವ ಬಡ ರೈತರು ‌ಸಾರ್ವಜನಿಕರಿಗೆ ಉಪಯೋಗ ವಿಲ್ಲದ ಅಭಿವೃದ್ಧಿ ‌ಶೂನ್ಯ ಬಜೆಟ್ ಇದಾಗಿತ್ತು..ಮಧ್ಯ‌ಕರ್ನಾಟಕ್ಕೆ ಯಾವ ಕೊಡುಗೆ ನೀಡಿಲ್ಲ. ಈ‌ ಭಾಗದ ಸಚಿವರು ಶಾಸಕರು‌  ಸರ್ಕಾರಕ್ಕೆ ಒತ್ತಡ ಹಾಕಿಲ್ಲ ಎಂದರು.ದಲಿತರ ಹಣ ಬೇರೆ ಯೋಜನೆಗೆ ನೀಡುತ್ತಿದ್ದಾರೆ.ರಾಜ್ಯ ಸಭೆ‌ಚುನಾವಣೆ ಗೆದ್ದ ಕಾಂಗ್ರೆಸ್ ಅಭ್ಯರ್ಥಿ‌ ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೆ.ಪತ್ರಕರ್ತರು ಈ‌ ಬಗ್ಗೆ ಪ್ರಶ್ನೆ ಮಾಡಿದರೆ ಹೆದರಿಸುತ್ತಾರೆ ಘೋಷಣೆ ಕೂಗಿದ ಬಗ್ಗೆ ವರದಿ ಪಡೆಯುವುದಾಗಿ ಹೇಳುತ್ತಾರೆ ಆದರೆ ಬ್ಯಾಡಗಿಯಲ್ಲಿ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.ಕಾಂಗ್ರೆಸ್ ನವರು ದುಷ್ಟ ಶಕ್ತಿಗಳಿಗೆ ಪ್ರೋತ್ಸಾಹ ‌ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಮತ‌ಕ್ಕಾಗಿ ಬಹು ಸಂಖ್ಯಾತರಿಗೆ ಮೋಸ ಮಾಡಲು‌ ಹೊರಟಿದ್ದಾರೆಂದರು.ಬೆಂಗಳೂರಿನ‌  ರಾಮೇಶ್ವರ ಕೆಫೆ‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವುದು ಸರ್ಕಾರದ ಬೇಜವಾಬ್ದಾರಿತನದಿಂದಶಾಂತಿ ಸೌಹಾರ್ದತೆಯಿಂದ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ‌ ವೆಸ್ಟ್ ಬೆಂಗಾಲ್ ಆಗುತ್ತಿದೆ.ಈ ಎಲ್ಲಾ ವಿಚಾರ ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿ.ಎಂ ಸತೀಶ್,.ಹೆಚ್.ಪಿ ವಿಶ್ವಾಸ್,ಕ್ರೋಟೇಶ್ ಗೌಡ ಉಪಸ್ಥಿತರಿದ್ದರು.