ಸರ್ಕಾರಿ ಆದರ್ಶ ಶಾಲೆಗೆ 1029 ಮಕ್ಕಳು ಪರೀಕ್ಷೆಗೆ ನೊಂದಾಣಿ.

ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.4: ತಾಲೂಕಿನ ಅನಂತನಹಳ್ಳಿ ಬಳಿ ಇರುವ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ 6ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗೆ ಒಟ್ಟು 1029 ವಿದ್ಯಾರ್ಥಿಗಳು ನೊಂದಾಯಿಸಿದ್ದು ಪರೀಕ್ಷೆ ಬರೆದರು.ಪಟ್ಟಣದ ಸರ್ಕರಿ ಪದವಿ ಪೂರ್ವ ಪ್ರೌಢಶಾಲೆ-312, ಸರ್ಕಾರಿ ಬಾಲಕಿಯ ಪ್ರೌಢಶಾಲೆ-288, ಆರ್‌ಎಸ್‌ಎನ್ ಅಂಗ್ಲ ಮಾದ್ಯಮ-185, ತರಳಬಾಳು ಪ್ರೌಢಶಾಲೆ 240 ಒಟ್ಟು 1029 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.ಪರೀಕ್ಷಾ ಕೇಂದ್ರಗಳಿಗೆ ಬಿಇಓ ಯು.ಬಸವರಾಜಪ್ಪ, ಇಸಿಓ ಗಿರಜ್ಜಿ ಮಂಜುನಾಥ, ಹೊನ್ನತೆಪ್ಪ, ಪೊಲಿಸ್ ತಂಡದ ಜೊತೆಗೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸಿದರು. ವಿವಿಧ ಪರೀಕ್ಷಾ ಕೇಂಧ್ರಗಳಲ್ಲಿ ಶಿಕ್ಷಕರ ತಂಡ ಕರ್ತವ್ಯದಲ್ಲಿ ತೊಡಗಿದ್ದರು. ಪರೀಕ್ಷಾ ಕೇಂದ್ರಗಳ ಸೂಕ್ತ ಭದ್ರತೆಯನ್ನು ಒದಗಿಸಲಾಗಿತ್ತು.
_ _ _