ಶಿವಮೊಗ್ಗ – ಶಿಕಾರಿಪುರ ಹೆದ್ದಾರಿಯಲ್ಲಿ ಟೋಲ್ ನಾಕಾ ಆರಂಭ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮಾ.೪ ಮಾ.1ರಿಂದ ಶಿಕಾರಿಪುರ ರಸ್ತೆಯಲ್ಲಿ  ಎರಡು ಕಡೆಗಳಲ್ಲಿ ಟೋಲ್ ಸಂಗ್ರಹಕ್ಕೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ.ಶಿವಮೊಗ್ಗ-ಶಿಕಾರಿಪುರ ಹಾಗೂ ಶಿಕಾರಿಪುರ-ಹಾನಗಲ್ ನಡುವೆ ಎರಡು ಕಡೆಗಳಲ್ಲಿ ಟೋಲ್ ಗೇಟ್ ನಿರ್ಮಿಸಲಾಗಿದೆ. ಶಿವಮೊಗ್ಗ-ಹಾನಗಲ್ ರಾಜ್ಯ ಹೆದ್ದಾರಿ-57ರಲ್ಲಿ ಸವಳಂಗ ಹಾಗೂ ಸೀಗೆಕಣಿವೆಯಲ್ಲಿ ಟೋಲ್‌ಗೇಟ್‌ಗಳಿವೆ. ವಾಹನ ಸವಾರರಿಂದ ರಸ್ತೆ ಬಳಕೆ ಶುಲ್ಕ ಸಂಗ್ರಹಿಸಲು ಬೆಂಗಳೂರಿನ ವಿನಯ್ ಲಾಡ್ ಎಂಟರ್‌ಪ್ರೈಸಸ್‌ಗೆ ಅವಕಾಶ ನೀಡಲಾಗಿದೆ. ಸ್ಥಳೀಯ ವಾಹನಗಳಿಗೆ ಮಾಸಿಕ ಪಾಸ್ ನೀಡಲಾಗುತ್ತದೆ. ಅದಕ್ಕೆ 220 ರೂ. ನಿಗದಿಪಡಿಸಲಾಗಿದೆ. ಟೋಲ್ ಸಂಗ್ರಹ ವಿಷಯ ಕಳೆದ ಮೂಾಲ್ಕು ತಿಂಗಳಿನಿಂದವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆಯೂ ನಡೆದಿತ್ತು. ಆದರೂ ರಾಜ್ಯ ಸರ್ಕಾರ ಮಣಿದಿಲ್ಲ. ಈಗ ಟೋಲ್ ಪಾವತಿಸುವುದು ವಾಹನ ಸವಾರರಿಗೆ ಅನಿವಾರ್ಯವಾಗಲಿದೆ.ಟೋಲ್‌ನಲ್ಲಿ ನಾಲ್ಕು ಪ್ರತ್ಯೇಕ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ದಿಕ್ಕಿಗೂ ತಲಾ ಎರಡು ಗೇಟ್ ಇದೆ. ಟೋಲ್ ಹಣ ಸಂಗ್ರಹಿಸುವವರಿಗೆ ಚಿಕ್ಕ ಕ್ಯಾಬಿನ್ ನಿರ್ಮಿಸಲಾಗಿದೆ. ಟೋಲ್ ಪ್ಲಾಜಾದಲ್ಲಿ ಬೆಳಕಿಗೆ ಲೈಟ್‌ಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಚಿಕ್ಕದಾಗಿ ಕಚೇರಿ ನಿರ್ಮಿಸಲಾಗಿದೆ. ಟೋಲ್ ಗೇಟ್ ಇರುವ ಭಾಗದಲ್ಲಿ ಮಾತ್ರ ಮಾಡಲಾಗಿದೆ.ಈ ರಸ್ತೆಗಳಲ್ಲಿ ಪ್ರತಿದಿನ ಸಂಚರಿಸುವವರಿಗೆ ಟೋಲ್ ಬಿಸಿ ಕೊಂಚ ಹೆಚ್ಚಾಗಿಯೇ ತಟ್ಟಲಿದೆ. ಇಂಧನ ದರದ ಹೆಚ್ಚಳದ ನಡುವೆ ಟೋಲ್ ದುಬಾರಿಯಾಗಲಿದೆ. ಹೀಗಾಗಿ ಸರ್ಕಾರದ ವಿರುದ್ಧ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗ-ಶಿಕಾರಿಪುರ ಹಾಗೂ ಶಿಕಾರಿಪರ-ಶಿರಾಳಕೊಪ್ಪ ನಡುವೆ ಸಂಚರಿಸುವ ವಾಹನಗಳು ಟೋಲ್ ಪಾವತಿಸುವುದು ಅನಿವಾರ್ಯ.